Vijayapura, Devanahalli, Bengaluru Rural : ದೇವನಹಳ್ಳಿ ತಾಲ್ಲೂಕು ಮಕ್ಕಳ ಸಾಹಿತ್ಯ ಪರಿಷತ್ (Makkala Sahitya Parishat) ವತಿಯಿಂದ ಭಾನುವಾರ ವಿಜಯಪುರ ಪಟ್ಟಣ ಅ.ಶಿ.ವೈ ನಗರ್ತ ಮಹಂತರ ಮಠದಲ್ಲಿ ಕೆ.ಎಸ್.ನಿಸ್ಸಾರ್ ಅಹಮದ್ (K. S. Nisar Ahmed) ಜನ್ಮದಿನಾಚರಣೆ ಹಾಗೂ ಅಗಲಿದ ಗಾಯಕಿ ಲತಾ ಮಂಗೇಶ್ವರ್ (Lata Mangeshkar) ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ವಿಜಯಪುರ ಜೇಸಿಸ್ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಎಸ್.ಎ.ನಾಗೇಶ್ ವೆಬಿನಾರ್ ಉಪನ್ಯಾಸದಲ್ಲಿ, ನಿತ್ಯೋತ್ಸವ ಕವಿ ಕೆ.ಎಸ್.ನಿಸ್ಸಾರ್ ಅಹಮದ್ ಅವರ ಜೀವನ ಹಾಗೂ ಅವರ ಸಾಹಿತ್ಯ ಸಾಧನೆಯ ಪರಿಚಯ ಮಾಡಿಕೊಟ್ಟು ಅವರು ರಚಿಸಿದ ನಿತ್ಯೋತ್ಸವ ಗೀತೆಯನ್ನು ಹಾಡಿದರು.
ತಾಲ್ಲೂಕು ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ವಿ.ಬಸವರಾಜು, ದೇ.ತಾ.ಮಸಾಪ ಗೌರವಾಧ್ಯಕ್ಷರಾದ ಶಿವಾಜಿರಾವ್ ನರಗುಂದ ಉಪಾಧ್ಯಕ್ಷರಾದ ಎನ್.ವಿಶ್ವನಾಥ್ , ಕೋಶಾಧಿಕಾರಿ ವಿ.ಸುಮನ್, ದೇವನಹಳ್ಳಿ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮ.ಸುರೇಶಬಾಬು, ಮಸಾಪ ಸಂಘಟನಾ ಕಾರ್ಯದರ್ಶಿ ಅಭಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.