
Chikkaballapur : ಚಿಕ್ಕಬಳ್ಳಾಪುರ ನಗರದಲ್ಲಿ ಭಾನುವಾರ ಈದ್ ಮಿಲಾದ್ (Eid Milad) ಹಾಗೂ ಜಸ್ನಏ ಗೌಸುಲ್ವ (Jasna e Gausul) ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಮತ್ತು ಮುಹಮ್ಮದ್ ಹಸ್ಸಾನ್ ಝೌಖಿ ಶಾ ಅಮ್ರಿ ಅವರು ಪ್ರವಾದಿ ಮಹಮ್ಮದ್ ಅವರ ಕುರಿತು ವಿಶೇಷ ಪ್ರವಚನ ನೀಡಿದರು.
ಈ ಸಂಧರ್ಭದಲ್ಲಿ ಅಹ್ಲೆ ಸುನ್ನತುಲ್ ಜಮಾತ್ ಜಿಲ್ಲಾಧ್ಯಕ್ಷ ಮುಹಮ್ಮದ್ ರಿಯಾಝ್ ಅಹ್ಮದ್ ಖಾದ್ರಿ ಮಾತನಾಡಿ “ಪ್ರವಾದಿ ಮಹಮ್ಮದ್ ಅವರ ಹುಟ್ಟು ಹಬ್ಬದ ಅಂಗವಾಗಿ ಈದ್ ಮಿಲಾದ್ ಹಾಗೂ ಜಸ್ನ ಏ ಗೌಸುಲ್ವರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಪ್ರಪಂಚಕ್ಕೆ ಶಾಂತಿ ಸಂದೇಶ ಸಾರಿದ ಮಹಾನ್ ವ್ಯಕ್ತಿಗಳ ಜೀವನದ ಬಗ್ಗೆ ವಿವರಿಸಲಾಗುತ್ತಿದೆ”ಎಂದು ತಿಳಿಸಿದರು.
ಅಹ್ಲೆ ಸುನ್ನತುಲ್ ಜಮಾತ್ ಕರ್ನಾಟಕದ ಜಿಲ್ಲಾಧ್ಯಕ್ಷ ಮಹಮ್ಮದ್ ರಿಯಾಜ್ ಅಹಮದ್ ಖಾದ್ರಿ, ಮೌಲಾನಾ ತೌಸಿಫ್ ರಝಾ, ಮೌಲಾನಾ ಸಾದಿಕ್ ಹುಸೇನ್, ನಗರಸಭೆ ಸದಸ್ಯ ಮುಹಮ್ಮದ್ ಜಾಫರ್, ಟಿ.ಎಂ.ಇಸ್ಮಾಯಿಲ್, ಪರ್ವೇಜ್ ಅಹಮದ್ ಇದ್ದರು.
For Daily Updates WhatsApp ‘HI’ to 7406303366
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur
The post ಈದ್ ಮಿಲಾದ್ ಹಾಗೂ ಜಸ್ನಏ ಗೌಸುಲ್ವ ಕಾರ್ಯಕ್ರಮ appeared first on Chikkaballapur.