
Chikkaballapur : ದೊಡ್ಡಬಳ್ಳಾಪುರದಿಂದ ಗೌರಿಬಿದನೂರಿಗೆ ಬಂದ ಶ್ರೀರಾಮನ ಸಂದೇಶ ಸಾರುವ, ಅಯೋಧ್ಯೆಯ ಇತಿಹಾಸ ತಿಳಿಸುವ ಹನುಮರಥ (Hanuma Ratha) ಶುಕ್ರವಾರ ಪೋಶೆಟ್ಟಿಹಳ್ಳಿ ಪ್ರವೇಶಿಸುವ ಮೂಲಕ ಚಿಕ್ಕಬಳ್ಳಾಪುರ ತಾಲ್ಲೂಕಿಗೆ ಪ್ರವೇಶ ಪಡೆಯಿತು.
ಈ ಸಂಧರ್ಭದಲ್ಲಿ ಎಸ್‍ಆರ್‌ಎಸ್ ಅಕ್ಷತಾ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿ.ದೇವರಾಜ್ ಮಾತನಾಡಿ “, ಭಾರತ ಹಿಂದೂಗಳ ಪವಿತ್ರ ನಾಡು. ಈ ನಾಡಿನಲ್ಲಿನ ಪ್ರತಿಯೊಬ್ಬ ಹಿಂದೂ ಧರ್ಮಿಯ ಶ್ರೀರಾಮನ ಸಂದೇಶ, ಚರಿತ್ರೆ ತಿಳಿಯಬೇಕು. ಅಯೋಧ್ಯೆಯ ಇತಿಹಾಸ ತಿಳಿಸಲಿರುವ ಹನುಮರಥವೂ ಚಿಕ್ಕಬಳ್ಳಾಪುರಕ್ಕೆ ಬಂದಿರುವುದು ಸಂತೋಷ ತಂದಿದೆ” ಎಂದು ತಿಳಿಸಿದರು.
ಆಂಜನೇಯಸ್ವಾಮಿ ದೇವಾಲಯದಲ್ಲಿ ಪೂಜಾ ಕಾರ್ಯ ನಡೆದ ನಂತರ ನೆರೆದಿದ್ದ ಜನರಿಗೆ ಲಾಡು ವಿತರಿಸಲಾಯಿತು. ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು.
The post ಹನುಮರಥಕ್ಕೆ ಸ್ವಾಗತ appeared first on Chikkaballapur.