Home Karnataka Kalaburagi Kalaburgi ನಗರದಲ್ಲಿ MES ವಿರುದ್ಧ ಪ್ರತಿಭಟನೆ

Kalaburgi ನಗರದಲ್ಲಿ MES ವಿರುದ್ಧ ಪ್ರತಿಭಟನೆ

184
Kalaburgi Dalita Sangharsha Samiti MES Protest

Kalaburgi : ಕಲಬುರ್ಗಿ ನಗರದಲ್ಲಿ ಬುಧವಾರ ಬೆಳಗಾವಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಪ್ರತಿಮೆ ಧ್ವಂಸ ಮಾಡಿ, ನಾಡಧ್ವಜ ದಹಿಸಿ, ಪೊಲೀಸರ ಮೇಲೆ ಹಲ್ಲೆ ಮಾಡಿರುವ ದುಷ್ಕರ್ಮಿಗಳನ್ನು ಕೂಡಲೇ ಗಡಿಪಾರು ಮಾಡಬೇಕು ಹಾಗೂ ರಾಜ್ಯದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯನ್ನು (MES) ನಿಷೇಧೀಸಬೇಕು ಎಂದು ಒತ್ತಾಯಿಸಿ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ, ಕೋಲಿ ಕಬ್ಬಲಿಗ ಬುಕಟ್ಟು ಸುಧಾರಣೆ ಸಮಿತಿ ಹಾಗೂ ರಾಜ್ಯ ದಲಿತ ಸಂಘರ್ಷ ಸಮಿತಿ ಸದಸ್ಯರು ಸರ್ದಾರ್‌ ವಲ್ಲಭಭಾಯಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆ ನಡೆಸಿದರು.

ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಬೆಳಗಾವಿ ಸುವರ್ಣ ವಿಧಾನ ಸೌಧದ ಎದುರು ಪ್ರತಿಷ್ಠಾಪಿಸಬೇಕು. ಪ್ರತಿಮೆ ಧ್ವಂಸಗೊಳಿಸಿದ ಎಂಇಎಸ್ ಸಂಘಟನೆಯ ಕಿಡಿಗೇಡಿಗಳ ವಿರುದ್ಧ ದೇಶದ್ರೋಹ ಕಾಯ್ದೆ ಯಡಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ತಿಳಿಸಿದರು

ಪ್ರತಿಭಟನೆಯಲ್ಲಿ ರಾಜ್ಯ ಹಿಂದು ಳಿದ ಜಾತಿಗಳ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಮಹಾಂತೇಶ ಕೌಲಗಿ, ಕೋಲಿ ಕಬ್ಬಲಿಗ ಬುಕಟ್ಟು ಸುಧಾರಣೆ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಲಚ್ಚಪ್ಪ ಜಮಾದಾರ, ಭೀಮಶಾ ಖನ್ನಾ, ಅಮೃತ ಡಿಗ್ಗಿ, ನಿಂಗಪ್ಪ ಹೇರೂರ್, ಮಲ್ಲಿಕಾರ್ಜುನ ಗುಡಬಾ, ಶಿವು ದಣಿ, ಶಿವಕುಮಾರ ಕಿರಣಗಿ, ವಿನೋದ ಜನೆವರಿ, ಹಣಮಯ್ಯ ಆಲೂರ್, ಬೈಲಪ್ಪ ನೆಲೋಗಿ, ಭೀಮಣ್ಣ ಸಾಲಿ, ಶರಣು ಕರಗರ, ಡಾ. ಗುಂಡು ಪಾಲ್ಗೊಂಡಿದ್ದರು.

NO COMMENTS

LEAVE A REPLY

Please enter your comment!
Please enter your name here

You cannot copy content of this page