
KGF : ಬೇತಮಂಗಲದ ಟಿ.ಗೊಲ್ಲಹಳ್ಳಿ (T Gollahalli) ಗ್ರಾಮ ಪಂಚಾಯಿತಿ ನಲ್ಲೂರು ಗ್ರಾಮದಿಂದ ಕುಳ್ಳಿಕುಪ್ಪ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಾಣ ಕಾಮಗಾರಿಗೆ ಶಾಸಕಿ ರೂಪಕಲಾ ಚಾಲನೆ (Bridge Construction) ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕಿ ರೂಪಕಲಾ “ಪಾಲಾರ್ ಕೆರೆಗೆ ನೀರು ಹರಿಯುವ ಹೊಳೆಗೆ ₹6 ಕೋಟಿ ಅನುದಾನದಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಸೇತುವೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ, ಶೀಘ್ರ ಸೇತುವೆ ನಿರ್ಮಿಸಿ ಸಾರ್ವಜನಿಕ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. ನತ್ತ, ಕಳ್ಳಿಕುಪ್ಪ, ಕೋಗಿಲಹಳ್ಳಿ, ಚಿನ್ನಪ್ಪನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಈ ಸೇತುವೆ ಮಾರ್ಗವಾಗಿಯೇ ಬೇತಮಂಗಲ, ಕೆಜಿಎಫ್ ಹಾಗೂ ಕೋಲಾರಕ್ಕೆ ತೆರಳಬೇಕಿದೆ. ಹಾಗಾಗಿ ಬೃಹತ್ ಮಟ್ಟದಲ್ಲಿ ಸೇತುವೆ ನಿರ್ಮಿಸಲಾಗುತ್ತಿದೆ” ಎಂದು ತಿಳಿಸಿದರು.
ಅ.ಮು.ಲಕ್ಷ್ಮಿ ನಾರಾಯಣ್, ಮಂಜುನಾಥ್, ವೆಂಕಟಾಚಲಪತಿ, ವಿನು ಕಾರ್ತಿಕ್, ದುರ್ಗಾ ಪ್ರಸಾದ್, ಭಾರ್ಗವ್ ರಾಮ್, ವೆಂಕಟಪತಿ, ಶಂಕರ್, ಸುರೇಂದ್ರ ಗೌಡ, ಶ್ರೀರಾಮಪ್ಪ, ಬ್ಯಾಟೇಗೌಡ, ವಿಜೇಂದ್ರ, ಸುಕನ್ಯಾ, ರೇಣುಕಮ್ಮ, ಶ್ರೀದೇವಿ, ರಮೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
For Daily Updates WhatsApp ‘HI’ to 7406303366
The post ಸೇತುವೆ ನಿರ್ಮಾಣ ಕಾಮಗಾರಿಗೆ ಶಾಸಕಿ ಚಾಲನೆ appeared first on Chikkaballapur | Chikballapur | Chikkaballapura | ಚಿಕ್ಕಬಳ್ಳಾಪುರ.