back to top
24.8 C
Bengaluru
Wednesday, September 3, 2025
HomeIndiaAndhra Pradeshತಿರುಪತಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬು ಬಳಕೆ - ಎನ್. ಚಂದ್ರಬಾಬು ನಾಯ್ಡು

ತಿರುಪತಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬು ಬಳಕೆ – ಎನ್. ಚಂದ್ರಬಾಬು ನಾಯ್ಡು

- Advertisement -
- Advertisement -

Andhra Pradesh: ಪ್ರಾಣಿಗಳ ಕೊಬ್ಬು ಬಳಸಿ ತಿರುಪತಿ(Tirupati) ದೇವಸ್ಥಾನದ ಲಡ್ಡು (Laddu) ತಯಾರಿಕೆ ಮಾಡಲಾಗುತ್ತಿದೆ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು(Chandrababu Naidu) ಗಂಭೀರ ಆರೋಪ ಮಾಡಿದ್ದಾರೆ. ಕೋಟ್ಯಂತರ ಭಕ್ತರು ಭಕ್ತಯಿಂದ ಸ್ವೀಕರಿಸುವ ಪ್ರಸಾದದ ಬಗ್ಗೆ ಚಂದ್ರಬಾಬು ನಾಯ್ಡು ಮಾಡಿರುವ ಆರೋಪ ಗಂಭೀರ ಚರ್ಚೆಗೆ ಕಾರಣವಾಗಿದೆ.

ತಿರುಪತಿ ಲಡ್ಡು(Tirupati Laddu) ಕೂಡ ಗುಣಮಟ್ಟವಿಲ್ಲದ ಪದಾರ್ಥಗಳಿಂದ ತಯಾರಿಸಲ್ಪಟ್ಟಿದೆ… ತುಪ್ಪದ ಬದಲು ಪ್ರಾಣಿಗಳ ಕೊಬ್ಬನ್ನು ಬಳಸಿದ್ದಾರೆ,’’ ಎಂದು ಅಮರಾವತಿಯಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಖ್ಯಮಂತ್ರಿ ನಾಯ್ಡು ಅವರು ಹಿಂದಿನ ಸಿಎಂ ಜಗನ್ ಮೋಹನ್ ರೆಡ್ಡಿ ವಿರುದ್ಧ ಆರೋಪಸಿದರು.

ಲಡ್ಡು ತಯಾರು ಮಾಡಲು ತುಪ್ಪ ಸೇರಿದಂತೆ ಹೆಚ್ಚಿನ ಗುಣಮಟ್ಟದ ಪದರ‍್ಥಗಳನ್ನು ಈಗ ಬಳಸಲಾಗುತ್ತಿದೆ ಮತ್ತು ಸಾಂಪ್ರದಾಯಿಕ ದೇವಾಲಯದಲ್ಲಿನ ಎಲ್ಲಾ ಆಹಾರ ನೈವೇದ್ಯಗಳು ಈಗ ಸುಧಾರಿತ ಗುಣಮಟ್ಟವನ್ನು ಹೊಂದಿವೆ ಎಂದರು.

KMF ಸ್ಪಷ್ಟನೆ

ತಿರುಪತಿ ದೇವಸ್ಥಾನದ ಲಡ್ಡು (Tirupati Laddu) ಬಳಕೆಗೆ ನಮ್ಮಿಂದ ತುಪ್ಪ ಖರೀದಿಸಲಾಗುತ್ತಿತ್ತು. ಆದರೆ ಕಳೆದ ನಾಲ್ಕು ರ‍್ಷಗಳಲ್ಲಿ ನಮ್ಮಿಂದ ಅವರು ತುಪ್ಪ ಖರೀದಿಸಿಲ್ಲ ಎಂದು ಕೆಎಂಎಫ್ (KMF) ಹೇಳಿಕೆ ನೀಡಿದೆ. ಆ ಮೂಲಕ, ತಿರುಪತಿ ಲಡ್ಡುವಿನಲ್ಲಿ ದನದ ಕೊಬ್ಬು (beef fat), ಮೀನಿನ ಎಣ್ಣೆ (fish fat) ಬೆರೆಸಲಾಗಿದೆ ಎಂಬ ಆರೋಪ ಇನ್ನಷ್ಟು ಗಟ್ಟಿಯಾಗುವುದಕ್ಕೆ ಪೂರಕ ಸಾಕ್ಷ್ಯ ದೊರೆತಿದೆ.

ವರ್ಷಗಳಲ್ಲಿ, ತಿರುಮಲ ತಿರುಪತಿ ದೇವಸ್ಥಾನದಲ್ಲಿ (TTD) – ಬೆಟ್ಟದ ದೇವಾಲಯವನ್ನು ನಿರ್ವಹಿಸುವ ಮಂಡಳಿ – ಲಡ್ಡುಗಳಿಗೆ ತುಪ್ಪವನ್ನು ತಯಾರಿಸುವ ಚೀಸ್ ಗುಣಮಟ್ಟವನ್ನು ಪರೀಕ್ಷಿಸಲು ಯಾವುದೇ ಕರ‍್ಯವಿಧಾನಗಳಿಲ್ಲ.

ಆದರೆ, ಮಂಡಳಿಯು ಇದೀಗ ಹೊಸ ಸಂವೇದನಾ ಗ್ರಹಿಕೆ ಪ್ರಯೋಗಾಲಯವನ್ನು ಸ್ಥಾಪಿಸಿದ್ದು, ಮೈಸೂರಿನಲ್ಲಿ ಗುಣಮಟ್ಟದ ತಪಾಸಣೆ ನಡೆಸಲು ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page