ಜೇನುಹುಳಗಳು (Honey Bee) ಅತ್ಯಂತ ಅಪಾಯಕಾರಿ ಕೀಟಗಳಲ್ಲಿ ಒಂದಾಗಿದೆ. ಇದು ಒಮ್ಮೆ ಕಚ್ಚಿದರೆ ಸಾಕು ಎಂತಹವರೇ ಆದರೂ ಬೆವರುತ್ತಾರೆ. ಸಾಮಾನ್ಯವಾಗಿ ಜೇನುಹುಳು ಕಚ್ಚಿದ ಜಾಗ ಊದಿಕೊಳ್ಳುತ್ತದೆ, ಕೆಂಪಾಗಿ ನೋವಾಗುತ್ತದೆ. ಮತ್ತೆ ಕೆಲವರಿಗಂತೂ ಜ್ವರವೇ (Fever) ಬರುತ್ತದೆ. ಆದರೆ ಜೇನುಹುಳದ ವಿಷವನ್ನು ಬಳಸಿ ಕ್ಯಾನ್ಸರ್‌ನಂತಹ (Cancer) ರೋಗವನ್ನು ಮೂಲದಿಂದ ನಾಶಪಡಿಸಲು ಸಾಧ್ಯವಾಗುತ್ತದೆ. ಜೇನುಹುಳದ ವಿಷವನ್ನು ಅನೇಕ ಸಮಸ್ಯೆಗಳಿಗೆ ಬಳಸಲಾಗುತ್ತದೆಯಾದರೂ, ಈ ಹೊಸ ಅಧ್ಯಯನವು ಭವಿಷ್ಯದಲ್ಲಿ ಅನೇಕ ಗಂಭೀರ ಸಮಸ್ಯೆಗಳಿಗೆ ಇದು ಅಮೃತವಾಗಿದೆ ಎಂದು ತಿಳಿಸಿದೆ.
ಜೇನುಹುಳ ಕಡಿತದ ವಿಷವು ಒಂದು ಗಂಟೆಯೊಳಗೆ ಕ್ಯಾನ್ಸರ್ ಕೋಶಗಳನ್ನು ಕೊಲ್ಲುತ್ತದೆ ಎಂದು ಆಸ್ಟ್ರೇಲಿಯಾ ವಿಶ್ವವಿದ್ಯಾಲಯ ಮತ್ತು ಹ್ಯಾರಿ ಪಾರ್ಕಿನ್ಸನ್ ವೈದ್ಯಕೀಯ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ಹೇಳುತ್ತಾರೆ. ವರದಿ ಪ್ರಕಾರ ಈ ಸಂಶೋಧನೆಯನ್ನು 2020ರಲ್ಲಿ ಮಾಡಲಾಗಿದೆ. ಸಂಶೋಧನೆಯನ್ನು NPJ ನೇಚರ್ ಪ್ರಿಸಿಶನ್ ಆಂಕೊಲಾಜಿ ಜರ್ನಲ್‌ನಲ್ಲಿ (Nature Precision Oncology)ಪ್ರಕಟಿಸಲಾಗಿದೆ.
ಈ ಸಂಶೋಧನೆಯು ಜೇನುನೊಣದ ವಿಷವು ಟ್ರಿಪಲ್ ನೆಗಟಿವ್ ಸ್ತನ ಕ್ಯಾನ್ಸರ್ ಮತ್ತು HER2 (human epidermal growth factor receptor 2) ಸ್ತನ ಕ್ಯಾನ್ಸರ್ (breast cancer)ಕೋಶಗಳನ್ನು ಕೊಲ್ಲುವಲ್ಲಿ ಪರಿಣಾಮಕಾರಿಯಾಗಿದೆ ಎಂದು ಹೇಳುತ್ತದೆ. ಸ್ತನ ಕ್ಯಾನ್ಸರ್ ಕೋಶಗಳ ಮೇಲೆ ಜೇನುನೊಣದ ವಿಷವನ್ನು ಯಾರೂ ಮೊದಲು ಪರೀಕ್ಷಿಸಲು ಮುಂದಾಗಲಿಲ್ಲ.
ಜೇನು ಹುಳದ ವಿಷದಲ್ಲಿ Cancer ವಿರೋಧಿ ಮೆಲಿಟಿನ್
ಆದರೆ ಆಸ್ಟ್ರೇಲಿಯಾ ವಿಶ್ವವಿದ್ಯಾಲಯದ ಪ್ರಧಾನ ಸಂಶೋಧಕ ಡಾ. ಸಿಯಾರಾ ಡಫ್ಫಿ ಅವರು ಸ್ತನ ಕ್ಯಾನ್ಸರ್ ಕೋಶಗಳ ಮೇಲೆ ಜೇನುನೊಣದ ವಿಷವನ್ನು ಪರೀಕ್ಷಿಸಿರುವುದಾಗಿ ಹೇಳಿದ್ದಾರೆ. (breast cancer )ನಂತರ ಜೇನು ಹುಳದ ವಿಷದಲ್ಲಿ ಮೆಲಿಟಿನ್ ಎಂಬ ಅಂಶವಿದೆ ಎಂದು ತಿಳಿದರು.
“ನಾವು ಕ್ಯಾನ್ಸರ್ ಕೋಶಗಳ ಮೇಲೆ ಧನಾತ್ಮಕ ಆವೇಶದ ಪೆಪ್ಟೈಡ್ ಅನ್ನು ಪ್ರಯತ್ನಿಸಿದ್ದೇವೆ. ನಾವು ಈ ಪೆಪ್ಟೈಡ್ ಅನ್ನು ಕೃತಕವಾಗಿ ತಯಾರಿಸಿದ್ದೇವೆ. ಈ ಪೆಪ್ಟೈಡ್ ಜೇನುನೊಣದ ವಿಷದಲ್ಲಿ ಕಂಡು ಬರುವ ಕ್ಯಾನ್ಸರ್ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ ಎಂದು ಬಹಿರಂಗ ಪಡಿಸಿದರು.
ಜೇನುಹುಳದ ವಿಷವನ್ನು ಕೀಮೋಥೆರಪಿಯೊಂದಿಗೆ (Chemotherapy )ಕೊನೆಯ ಹಂತದ ಸ್ತನ ಕ್ಯಾನ್ಸರ್ಗೆ ಚಿಕಿತ್ಸೆ ನೀಡಲು ಬಳಸಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಅಧ್ಯಯನದಲ್ಲಿ, ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿರುವ ಇಲಿಗಳಲ್ಲಿ ಮೆಲಿಟಿನ್ ಮತ್ತು ಡೋಸೆಟಾಕ್ಸೆಲ್ ಸಂಯೋಜನೆಯನ್ನು ಬಳಸಿದಾಗ, ಫಲಿತಾಂಶಗಳು ಬಹಳ ಪರಿಣಾಮಕಾರಿಯಾಗಿವೆ ಎನ್ನಲಾಗಿದೆ.
(Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. Kannada top news ಗೂ ಇದಕ್ಕೂ ಸಂಬಂಧವಿಲ್ಲ ಮತ್ತು kannada top news ಇದಕ್ಕೆ ಜವಾಬ್ದಾರಿಯಲ್ಲ).