Bengaluru: ಬೆಂಗಳೂರಿನಲ್ಲಿ ತನ್ನ ಮತ್ತೊಂದು ಹೊಸ ಕ್ಯಾಂಪಸ್ ಅನ್ನು ಸ್ಥಾಪಿಸಲು ಯೋಜನೆ ಮಾಡಿದೆ. ಇದರೊಂದಿಗೆ 15,000 ಉದ್ಯೋಗಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ. ಸ್ಯಾಪ್ ಲ್ಯಾಬ್ಸ್ ಇಂಡಿಯಾ (SAP Lab India) ಹೊಸ ಕ್ಯಾಂಪಸ್‌ಗೆ ಮೇ 29, 2023 ರಂದು ಅಡಿಪಾಯ ಹಾಕಲಾಯಿತು. ಇದು ಈ ವರ್ಷ ಕಾರ್ಯಾರಂಭ ಮಾಡಲಿದೆ. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (Bengaluru International Airport) ಸಮೀಪದಲ್ಲಿ ಬರುವ ಹೊಸ ಕ್ಯಾಂಪಸ್ 41.07 ಎಕರೆ ವಿಸ್ತೀರ್ಣವನ್ನು ಹೊಂದಿದೆ.̲
SAP Labs ಜಾಗತಿಕ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಶೇ.40ರಷ್ಟು ಕೊಡುಗೆಯನ್ನು ಬೆಂಗಳೂರು ನೀಡುತ್ತಿದ್ದು, ಕಂಪನಿಯ ಪೇಟೆಂಟ್ಗಳಲ್ಲಿ ನಾಲ್ಕನೇ ಒಂದು ಭಾಗ ಇಲ್ಲಿಂದಲೇ ಬರುತ್ತಿದೆ. ಕಂಪನಿಯ 13,000 ಉದ್ಯೋಗಿಗಳಲ್ಲಿ ಶೇ. 50ರಷ್ಟು ಜನರು ಎಐ ಕೌಶಲ್ಯವನ್ನು ಹೊಂದಿದ್ದು ಕಂಪನಿ AI ನಲ್ಲಿ ಹೆಚ್ಚಿನ ಪರಿಣತಿ ಸಾಧಿಸಿದೆ. ಇದು ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತಿರುವ ಎರಡನೇ ಸ್ಯಾಪ್ ಲ್ಯಾನ್ಸ್ ಇಂಡಿಯಾ ಕಂಪನಿಯಾಗಿದೆ.
ಇದರ ಬಗ್ಗೆ ಮಾತನಾಡಿದ ಸ್ಯಾಪ್ ಲ್ಯಾಬ್ಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಗ್ರಾಹಕ ನಾವೀನ್ಯತೆ ಸೇವೆಗಳ ಮುಖ್ಯಸ್ಥೆ ಸಿಂಧು ಗಂಗಾಧರನ್, ಅತಿದೊಡ್ಡ R&D ಕೇಂದ್ರವಾಗಿರುವ ಕರ್ನಾಟಕದಲ್ಲಿ SAP ಉಪಸ್ಥಿತಿಯು ಜಾಗತಿಕ ಕಂಪನಿಯ ಒಟ್ಟಾರೆ R&D ಯ 40 ಪ್ರತಿಶತವನ್ನು ಕೊಡುಗೆ ನೀಡುತ್ತದೆ. ಹೊಸ ಕ್ಯಾಂಪಸ್ ಭಾರತ ಮತ್ತು ಕರ್ನಾಟಕಕ್ಕೆ SAP ಬದ್ಧತೆಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಹೇಳಿದರು.