back to top
25.1 C
Bengaluru
Saturday, December 21, 2024
HomeIndiaJammu and KashmirJammu ಮತ್ತು Kashmir Election: 3ನೇ phase ಮತದಾನ

Jammu ಮತ್ತು Kashmir Election: 3ನೇ phase ಮತದಾನ

- Advertisement -
- Advertisement -

Jammu and Kashmir: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಏಳು ಜಿಲ್ಲೆಗಳ ವಿಧಾನಸಭೆ ಕ್ಷೇತ್ರಗಳಿಗೆ 3ನೇ ಮತ್ತು ಅಂತಿಮ (3rd phase) ಹಂತದ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, 415 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ ಮಂಗಳವಾರ ನಿರ್ಧಾರವಾಗಲಿದೆ.

3ನೇ ಹಂತದಲ್ಲಿ (3rd phase) 39,18,220 ಮತದಾರರು ಮತದಾನ ಮಾಡಲು ಅರ್ಹತೆ ಪಡೆದುಕೊಂಡಿದ್ದು, ಮಂಗಳವಾರ ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಇದರಲ್ಲಿ 20,09,033 ಪುರುಷ (Male) ಮತದಾರರು, 19,09,130 ಮಹಿಳಾ (Female)ಮತದಾರರು ಮತ್ತು 57 ತೃತೀಯಲಿಂಗಿ (Transgender) ಮತದಾರಿದ್ದಾರೆ.

18 ರಿಂದ 19 ವರ್ಷ ವಯಸ್ಸಿನ 1.94 ಲಕ್ಷ ಯುವ ಮತದಾರರು 3 ನೇ ಹಂತದ ವಿಧಾನಸಭಾ ಚುನಾವಣೆಯಲ್ಲಿ (assembly elections) ಮತ ಚಲಾಯಿಸಲು ಅರ್ಹರಾಗಿದ್ದಾರೆ. ಈ ಹಂತದಲ್ಲಿ 35,860 ವಿಕಲಚೇತನರು (differently abled) (PwDs) ಮತ್ತು 85 ವರ್ಷಕ್ಕಿಂತ ಮೇಲ್ಪಟ್ಟ 32,953 ಮತದಾರರು ಭಾಗವಹಿಸಲಿದ್ದಾರೆ.

ಬಿಗಿ ಭದ್ರತೆಯ ನಡುವೆ ಉತ್ತರ ಕಾಶೀರದ ಮೂರು ಗಡಿ ಜಿಲ್ಲೆಗಳ 16 ವಿಧಾನಸಭಾ ಕ್ಷೇತ್ರಗಳಲ್ಲಿ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಯಿತು.

ಪ್ರಧಾನಿ ಮೋದಿ ಮನವಿ

ಚುನಾವಣೆ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ (PM Modi) ಅವರು, ಮೂರನೇ ಮತ್ತು ಕೊನೆಯ ಸುತ್ತಿನ ಮತದಾನ ಇದಾಗಿದೆ. ಪ್ರಜಾಪ್ರಭುತ್ವದ ಹಬ್ಬವನ್ನು ಯಶಸ್ವಿಗೊಳಿಸಲು ಎಲ್ಲಾ ಮತದಾರರು ಮುಂದೆ ಬಂದು ಮತದಾನ ಮಾಡಬೇಕೆಂದು ವಿನಂತಿಸಿದ್ದಾರೆ.

ಪ್ರಥಮ ಬಾರಿಗೆ ಮತದಾನ ಮಾಡಲಿರುವ ಯುವ ಸ್ನೇಹಿತರಲ್ಲದೆ, ಮಹಿಳಾ ಶಕ್ತಿಯೂ ಹೆಚ್ಚಿನ ಸಂಖ್ಯೆಯಲ್ಲಿ ಮತದಾನದಲ್ಲಿ ಪಾಲ್ಗೊಳ್ಳುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದ್ದಾರೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!

You cannot copy content of this page