Bengaluru : ಮಾರ್ಚ್ 3 ರಿಂದ ಏಪ್ರಿಲ್ ವರೆಗೆ HOPCOMS ವತಿಯಿಂದ ರಿಯಾಯಿತಿ ದರದಲ್ಲಿ ‘ದ್ರಾಕ್ಷಿ ಮತ್ತು ಕಲ್ಲಂಗಡಿ ಮಾರಾಟ ಮೇಳ’ (Grapes, Watermelon Fair) ಆಯೋಜಿಸಲಾಗಿದೆ. Lalbagh ಬಳಿ ಇರುವ ಹಾಪ್‌ಕಾಮ್ಸ್ ಕೇಂದ್ರ ಕಚೇರಿಯಲ್ಲಿ ಮಾರ್ಚ್ 3 ರಂದು ಬೆಳಿಗ್ಗೆ 11 ಗಂಟೆಗೆ ತೋಟಗಾರಿಕೆ ಸಚಿವ ಮುನಿರತ್ನ ಮೇಳ ಉದ್ಘಾಟಿಸುವರು.
” ಈ ಬಾರಿ ವಿಜಯಪುರ, ಬಾಗಲಕೋಟೆ, ಗದಗ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಬೆಳೆದ 8ಕ್ಕೂ ಹೆಚ್ಚು ತಳಿಯ ದ್ರಾಕ್ಷಿ ಹಾಗೂ ಕಿರಣ, ನಾಮಧಾರಿ ತಳಿಯ ಕಲ್ಲಂಗಡಿ ಮೇಳದಲ್ಲಿ ಇರಲಿದ್ದು ಶೇ 5ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ನಡೆಯಲಿದೆ. ಮೇಳದ ಮೊದಲ ವಾರದಲ್ಲಿ 50 ಟನ್ ದ್ರಾಕ್ಷಿ ಮತ್ತು 25 ಟನ್ ಕಲ್ಲಂಗಡಿ ಮಾರಾಟ ಆಗುವ ನಿರೀಕ್ಷೆ ಇದೆ” ಎಂದು ಹಾಪ್‌ಕಾಮ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಉಮೇಶ್ ಎಸ್.ಮಿರ್ಜಿ ತಿಳಿಸಿದರು.