Hyderabad: ನಟಿ ಸಮಂತಾ (Samantha) ಹಾಗೂ ನಟ ನಾಗಚೈತನ್ಯ (Naga Chaitanya) ಬಗ್ಗೆ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದ ತೆಲಂಗಾಣ ಅರಣ್ಯ ಸಚಿವೆ ಕೊಂಡಾ ಸುರೇಖಾ (Telangana Forest Minister Konda Surekha) ಇದೀಗ ಕ್ಷಮೆ ಕೇಳಿದ್ದಾರೆ.
ಸಮಂತಾ ಬಗ್ಗೆ ಸುರೇಖಾ ಹೇಳಿದ್ದ ಅಶ್ಲೀಲ ಕಮೆಂಟ್ ಸಾಕಷ್ಟು ಸಂಚಲನ ಸೃಷ್ಟಿ ಮಾಡಿತ್ತು. ಜೂನಿಯರ್ NTR, ನಾಗ ಚೈತನ್ಯ (Naga Chaitanya) ಸೇರಿದಂತೆ ಅನೇಕರು ಈ ಬಗ್ಗೆ ಧ್ವನಿ ಎತ್ತಿದ್ದರು. ಈಗ ಈ ಸಂಬಂಧ ಸುರೇಖಾ ಸ್ಪಷ್ಟನೆ ನೀಡಿ ಪ್ರಕಟಣೆ ಹೊರಡಿಸಿದ್ದಾರೆ.
ಸಮಂತಾ ರುತ್ ಪ್ರಭು, ನಾಗಾರ್ಜುನ ಮತ್ತು ನಾಗ ಚೈತನ್ಯ ಅವರ ಬಗ್ಗೆ ತೀರಾ ಅಸಭ್ಯ ರೀತಿಯಲ್ಲಿ ಅವರು ಮಾತನಾಡಿದ್ದಾರೆ. ಸಾರ್ವಜನಿಕವಾಗಿ ಕೊಂಡ ಸುರೇಖಾ ಆಡಿರುವ ಮಾತುಗಳಿಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
ಕೆ.ಟಿ. ರಾಮರಾವ್ ಅವರನ್ನು ವಿರೋಧಿಸುವ ಭರದಲ್ಲಿ ಸುರೇಖಾ ಅವರು ಇಲ್ಲಸಲ್ಲದ ವಿಚಾರಗಳನ್ನು ಎಳೆದು ತಂದಿದ್ದಾರೆ. ನಾಗ ಚೈತನ್ಯ ಮತ್ತು ಸಮಂತಾ ವಿಚ್ಛೇದನ ಪಡೆಯಲು ಕೆ.ಟಿ. ರಾಮ ರಾವ್ ಕಾರಣ ಎಂದು ಸುರೇಖಾ ಹೇಳಿದ್ದಾರೆ.
ಈ ಹೇಳಿಕೆ ವಿರುದ್ಧ ಎಲ್ಲರೂ ಸಿಡಿದೆದ್ದಿದ್ದಾರೆ. ಅವರ ಬಳಿ ಕ್ಷಮೆಗೆ ಆಗ್ರಹಿಸಲಾಗಿತ್ತು. ಕೊನೆಗೂ ಅವರು ಕ್ಷಮೆ ಕೇಳಿದ್ದಾರೆ.
‘ಮಹಿಳೆಯರ ಬಗ್ಗೆ ಆ ನಾಯಕ ಹೊಂದಿರುವ ಕೀಳು ಮನೋಭಾವವನ್ನು ತೋರಿಸುವುದು ಮಾತ್ರ ನನ್ನ ಉದ್ದೇಶ ಆಗಿತ್ತೇ ಹೊರತು, ಸಮಂತಾ ಅವರ ಭಾವನೆಗೆ ದಕ್ಕೆ ತರೋದಲ್ಲ. ನೀನು ಸ್ವಶಕ್ತಿಯಿಂದ ಬೆಳೆದು ಬಂದ ಬಗ್ಗೆ ನನಗೆ ಅಭಿಮಾನ ಇದೆ. ಅದು ಆದರ್ಶವೂ ಹೌದು’ ಎಂದು ಕೊಂಡಾ ಸುರೇಖಾ ಟ್ವೀಟ್ ಮಾಡಿದ್ದಾರೆ.
‘ನನ್ನ ಕಾಮೆಂಟ್ಗಳಿಂದ ನಿಮಗೆ ಹಾಗೂ ನಿಮ್ಮ ಅಭಿಮಾನಿಗಳಿಗೆ ಬೇಸರ ಆಗಿದ್ದರೆ ನಾನು ನನ್ನ ಕಾಮೆಂಟ್ಗಳನ್ನು ಬೇಷರತ್ತಾಗಿ ಹಿಂತೆಗೆದುಕೊಳ್ಳುತ್ತೇನೆ. ಅನ್ಯಥಾ ಭಾವಿಸಬೇಡಿ’ ಎಂದು ಸುರೇಖಾ ಬರೆದುಕೊಂಡಿದ್ದಾರೆ.