North Korea: ವಿಶೇಷ ಕಾರ್ಯಾಚರಣೆ ಪಡೆಗಳ ಘಟಕಕ್ಕೆ ಭೇಟಿ ನೀಡಿದ ಕಿಮ್ (Kim Jong Un), ಉತ್ತರ ಕೊರಿಯಾದ (North Korea) ಸಾರ್ವಭೌಮತ್ವವನ್ನು ಅತಿಕ್ರಮಿಸುವ ಸಶಸ್ತ್ರ ಪಡೆಗಳನ್ನು ಬಳಸಲು ದಕ್ಷಿಣ ಕೊರಿಯಾ ಪ್ರಯತ್ನಿಸಿದರೆ, ಅಣ್ವಸ್ತ್ರ ಸೇರಿದಂತೆ ತನ್ನಲ್ಲಿರುವ ಎಲ್ಲಾ ಆಕ್ರಮಣಕಾರಿ ಪಡೆಗಳನ್ನು ಹಿಂಜರಿಕೆಯಿಲ್ಲದೆ ಬಳಸುತ್ತದೆ ಎಂದು ಕಿಮ್ ಎಚ್ಚರಿಸ್ದಿದಾರೆ ಎಂದು ಉತ್ತರದ ಅಧಿಕತ ಕೊರಿಯನ್ ಕೇಂದ್ರ ಸುದ್ದಿ ಸಂಸ್ಥೆ ವರದಿ ಮಾಡಿದೆ.
ತನ್ನ ದೇಶದ ಸಶಸ್ತ್ರ ಪಡೆಗಳ ದಿನದಂದು ದಕ್ಷಿಣ ಕೊರಿಯಾದ (South Korea) ಅಧ್ಯಕ್ಷ ಯೂನ್ ಸುಕ್ ಯೋಲ್ (Yoon Suk Yeol) ಮಾಡಿದ ಭಾಷಣಕ್ಕೆ ಕಿಮ್ ಅವರ ಹೇಳಿಕೆಯು ಪ್ರತಿಕ್ರಿಯೆಯಾಗಿದೆ.
ದಕ್ಷಿಣ ಕೊರಿಯಾದ ಅತ್ಯಂತ ಶಕ್ತಿಶಾಲಿ ಬ್ಯಾಲಿಸ್ಟಿಕ್ ಕ್ಷಿಪಣಿ ಮತ್ತು ಉತ್ತರ ಕೊರಿಯಾವನ್ನು ಗುರಿಯಾಗಿಸುವ ಇತರ ಶಸ್ತ್ರಾಸ್ತ್ರಗಳನ್ನು ಅನಾವರಣಗೊಳಿಸಿದ ಯೂನ್, ಉತ್ತರ ಕೊರಿಯಾ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸಲು ಪ್ರಯತ್ನಿಸುವ ದಿನವು ಕಿಮ್ ಸರ್ಕಾರದ ಅಂತ್ಯವಾಗಲಿದೆ ಏಕೆಂದರೆ ಆ ದಿನವು ಕಿಮ್ ದಕ್ಷಿಣ ಕೊರಿಯಾದ ದೃಢವಾದ ಪ್ರತಿಕ್ರಿಯೆಯನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದ್ದರು.