Ramanagara: ಚನ್ನಪಟ್ಟಣ ಉಪಚುನಾವಣೆಗೆ (By Election) ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಸ್ಪರ್ಧೆ ಬಹುತೇಕ ಫಿಕ್ಸ್ ಆದಂತಿದೆ. ಜೆಡಿಎಸ್ ನಾಯಕ, ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ (HD Kumaraswamy) ಹಾಗೂ ಯುವನಾಯಕ ನಿಖಿಲ್ ಕುಮಾರಸ್ವಾಮಿ ಇಂದು ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ.
ಕ್ಷೇತ್ರದ 5 ಜಿಲ್ಲಾ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಬಹಿರಂಗ ಸಭೆಯಲ್ಲಿ (JDS Public Meeting) ಭಾಗಿಯಾಗಿದ್ದಾರೆ.
ಹೀಗಾಗಿ ಚನ್ನಪಟ್ಟಣದಲ್ಲಿ ನಿಖಿಲ್ ಸ್ಪರ್ಧೆ ಬಗ್ಗೆ ಚರ್ಚೆ ಜೋರಾಗಿದೆ. ಮತ್ತೊಂದೆಡೆ HD ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿಯವರು ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ವಾಲ್ ಅವರನ್ನು ಭೇಟಿ ಮಾಡಿದ್ದಾರೆ.
ಜೊತೆಗೆ ಹೆಚ್ಡಿಕೆ, ನಿಖಿಲ್ ಚನ್ನಪಟ್ಟಣ ಉಪ ಚುನಾವಣೆ ಬಗ್ಗೆ ಚರ್ಚಿಸಿದ್ದಾರೆ. ರಾಧಾಮೋಹನ್ ದಾಸ್ ಅವರು ಕ್ಷೇತ್ರದ ವಿಚಾರದಲ್ಲಿ ಗೊಂದಲವಿಲ್ಲ ಎಂದಿದ್ದಾರೆ.
ಇನ್ನು ಚನ್ನಪಟ್ಟಣದ ಕೋಡಂಬಳ್ಳಿ ಗ್ರಾಮದಲ್ಲಿ ಜೆಡಿಎಸ್ ಕಾರ್ಯಕರ್ತರ ಜೊತೆ ಸಭೆ ಮಾಡಿದ ಹೆಚ್ಡಿಕೆ, ದಲಿತಾಸ್ತ್ರವನ್ನೂ ಪ್ರಯೋಗಿಸಿದ್ರು, ದಲಿತ ಸಮುದಾಯದವರೇ ಕಾಂಗ್ರೆಸ್ನವರನ್ನ ನಂಬಬೇಡಿ, ಮೋಸಗಾರರು ಅಂದ್ರು. ಕುಮಾರಸ್ವಾಮಿಗೆ ಎರಡೆರಡೂ ಟೆನ್ಷನ್ ಇದೆ. NDA ಅಭ್ಯರ್ಥಿಯ ಜೊತೆಗೆ ಮಗನ ರಾಜಕೀಯ ಭವಿಷ್ಯವೂ ಮುಖ್ಯ ಆಗಿದೆ.
ಒಂದು ವೇಳೆ ಕ್ಷೇತ್ರ ಕೈ ತಪ್ಪಿದ್ರೆ ಚನ್ನಪಟ್ಟಣದಲ್ಲಿ ಹಿಡಿತ ಸಾಧಿಸೋಕೆ ಆಗಲ್ಲ, ಇನ್ನು ಜೆಡಿಎಸ್ ಹಾಗೂ ಕಾಂಗ್ರೆಸ್ಗೆ ನೇರಾ ನೇರ ಪೈಪೋಟಿ ಇರೋದ್ರಿಂದ ಸಿ.ಪಿ.ಯೋಗೇಶ್ವರ್ನ್ನೂ ಒಟ್ಟಾಗಿ ಕರೆದುಕೊಂಡು ಹೋಗೋದು ಸವಾಲು ಆಗಿದೆ.