Gauribidanur : ಗೌರಿಬಿದನೂರು ಆರ್ಯ ಈಡಿಗರ ಕ್ಷೇಮಾಭಿವೃದ್ಧಿ ಸಂಘದಿಂದ ಗೌರಿಬಿದನೂರು ನಗರದ ಕಲಾ ಭವನದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು (Narayana Guru Jayanthi) ಅವರ 170ನೇ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ನಡೆಸಲಾಯಿತು.
ನಾರಾಯಣ ಗುರು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ “ನಾರಾಯಣ ಗುರು, ಬಹುದೊಡ್ಡ ತತ್ವಜ್ಞಾನಿ, ಸಮಾಜ ಸುಧಾರಕರು. ಜಾತಿ ಪದ್ಧತಿ ತುಂಬಿದ್ದ ಕಾಲದಲ್ಲಿ ವಿದ್ಯೆ ಕಲಿಯುವುದು ಅಪರಾಧವಾಗಿತ್ತು. ಸಂಸ್ಕೃತ ಜ್ಞಾನದ ಭಂಡಾರವಾಗಿತ್ತು. ಅದನ್ನು ಕೇವಲ ಮೇಲ್ಜಾತಿಯವರಿಗೆ ಮಾತ್ರ ಕಲಿಸಲಾಗುತ್ತಿತ್ತು. ಅಂತಹ ಕಾಲ ಘಟ್ಟದಲ್ಲಿ, ನಾರಾಯಣ ಗುರು ಸಂಸ್ಕೃತದ ಹಲವು ಗ್ರಂಥಗಳನ್ನು ರಚಿಸಿ, ಗುರುಕುಲ ಸ್ಥಾಪಿಸಿ ಜನರಿಗೆ ಶಿಕ್ಷಣ ನೀಡಿದರು. ಜಾತಿ ಪದ್ಧತಿಯಿಂದ ಅವಮಾನಕ್ಕೊಳಗಾಗಿದ್ದ ಜನರರಿಗೆ ಧೈರ್ಯ ತುಂಬಿ ಮೌಢ್ಯ ಪದ್ಧತಿ ತೊರೆಯಬೇಕು. ಮಾನವರೆಲ್ಲ ಒಂದೇ ಎಂದು ದೇಶಕ್ಕೆ ಸಾರಿ ಹೇಳಿ ವಿಶ್ವ ಮಾನವರಾದರು” ಎಂದು ಹೇಳಿದರು.
ಆರ್ಯ ಈಡಿಗರ ಸಂಘದ ಗೌರವಧ್ಯಕ್ಷ ಜಿ.ಎನ್ ನಾಗರಾಜ್, ನಗರಸಭೆ ಅಧ್ಯಕ್ಷ ಲಕ್ಷ್ಮಿನಾರಾಯಣಪ್ಪ, ನಾಗರಾಜ್ ಜಿ.ಎನ್, ಅಧ್ಯಕ್ಷರಾದ ವಿಜಯ್ ರಾಕಲ್ ಚಂದ್, ಸೂರಜ್, ಕಾಂಗ್ರೆಸ್ ಯುವ ಮುಖಂಡ ಮಂಜುನಾಥ್, ವೆಂಕಟರಮಣಪ್ಪ ಉಪಸ್ಥಿತರಿದ್ದರು.
For Daily Updates WhatsApp ‘HI’ to 7406303366
The post ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ appeared first on Chikkaballapur | Chikballapur | Chikkaballapura | ಚಿಕ್ಕಬಳ್ಳಾಪುರ ಸುದ್ದಿ.