
Chikkaballapur : ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಚಿಕ್ಕಬಳ್ಳಾಪುರ ಜಿಲ್ಲಾ ಪ್ರೌಢಶಾಲಾ ಬಾಲಕರ ಕಬಡ್ಡಿ ತಂಡದ (District Kabaddi Team) 12 ಆಟಗಾರರಿಗೆ ಡಿಡಿಪಿಐ ಕಚೇರಿ ಆವರಣದಲ್ಲಿ ಪ್ರಶಸ್ತಿ ಪತ್ರ ಮತ್ತು ಬಹುಮಾನ ವಿತರಿಸಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಿಕ್ಷಣ ಇಲಾಖೆ ಉಪನಿರ್ದೇಶಕ ಬೈಲಾಂಜನಪ್ಪ “ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನಲ್ಲಿ ಅ.17ರಿಂದ 19ರವರೆಗೆ ರಾಜ್ಯ ಮಟ್ಟದ ಕ್ರೀಡಾಕೂಟ ನಡೆಯಲಿದೆ. ಚಿಕ್ಕಬಳ್ಳಾಪುರ ತಂಡದಿಂದ ರಾಜ್ಯಕ್ಕೆ ಆಯ್ಕೆಯಾದ ಬಹುತೇಕ ಮಕ್ಕಳು ಗ್ರಾಮೀಣ ಭಾಗದ ವಿದ್ಯಾರ್ಥಿಗಳಾಗಿದ್ದು ಮಕ್ಕಳಿಗೆ ನುರಿತ ತರಬೇತಿಯನ್ನು ನೀಡಲಾಗಿದೆ. ರಾಜ್ಯ ಹಂತದಲ್ಲಿ ಜಿಲ್ಲಾ ತಂಡ ಪ್ರಶಸ್ತಿ ಗೆದ್ದು, ಒಳ್ಳೆಯ ಹೆಸರನ್ನು ಕೀರ್ತಿ ಪತಾಕೆ ತರಲಿ” ಎಂದು ಪ್ರಶಂಸಿದರು.
ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಖಜಾಂಜಿ ಬಾಲರಾಜ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ನಟರಾಜ್, ಚಿಕ್ಕಬಳ್ಳಾಪುರ ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಅರುಣ್ ಕುಮಾರ್, ಅಂಜನಾದ್ರಿ ವಿದ್ಯಾ ಸಂಸ್ಥೆಗಳ ಪ್ರಾಂಶುಪಾಲ ಸುನಿಲ್, ಮುಖ್ಯ ಶಿಕ್ಷಕ ವೆಂಕಟೇಶ್, ಉಪನ್ಯಾಸಕ ನಾರಾಯಣ ಸ್ವಾಮಿ, ಕಬಡ್ಡಿ ತಂಡದ ಮ್ಯಾನೇಜರ್ ಶಮೀಮ್ ಬಾಷಾ, ಕೋಚ್ ಸುರೇಶ್ ಬಾಬು, ಅಶ್ವತ್ಥಪ್ಪ, ಬಾಬುರೆಡ್ಡಿ ಉಪಸ್ಥಿತರಿದ್ದರು.
For Daily Updates WhatsApp ‘HI’ to 7406303366
The post ರಾಜ್ಯ ಮಟ್ಟದ ಕಬಡ್ಡಿಗೆ ಜಿಲ್ಲಾ ತಂಡ appeared first on Chikkaballapur | Chikballapur | Chikkaballapura | ಚಿಕ್ಕಬಳ್ಳಾಪುರ ಸುದ್ದಿ.