New Delhi: ಮಹಾರಾಷ್ಟ್ರದಲ್ಲಿ (Maharashtra) BJP ರೈತರ ದೊಡ್ಡ ಶತ್ರು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಸೋಮವಾರ ಪ್ರತಿಪಾದಿಸಿದ್ದಾರೆ ಮತ್ತು ಡಬಲ್ ಇಂಜಿನ್ ಸರ್ಕಾರವನ್ನು (double-engine government) ಅಧಿಕಾರದಿಂದ ತೆಗೆದುಹಾಕುವುದರಿಂದ ಮಾತ್ರ ರೈತರಿಗೆ ಲಾಭ ಎಂದು ಹೇಳಿದ್ದಾರೆ.
X ನಲ್ಲಿ ಹಿಂದಿಯಲ್ಲಿ ಬರೆದ ಪೋಸ್ಟ್ನಲ್ಲಿ, ಮಹಾರಾಷ್ಟ್ರದಲ್ಲಿ ರೈತರ ಆತ್ಮಹತ್ಯೆಗಳ ಸಂಬಂಧ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಖರ್ಗೆ, ರಾಜ್ಯವನ್ನು ಬರ ಮುಕ್ತಗೊಳಿಸುವ ಭರವಸೆ ಕೇವಲ “ಜುಮ್ಲಾ” ಎಂದು ಟೀಕಿಸಿದರು.
“BJP ಯು ಮಹಾರಾಷ್ಟ್ರದಲ್ಲಿ ರೈತರ ದೊಡ್ಡ ಶತ್ರುವಾಗಿದೆ. ಈಗಾಗಲೇ 20,000 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಮತ್ತು 20,000 ಕೋಟಿ ವಾಟರ್ ಗ್ರಿಡ್ ಭರವಸೆ ಸುಳ್ಳಾಗಿದೆ ಎಂದು ವಾಗ್ದಾಳಿ ನಡೆಸಿದರು.
ರಫ್ತು ನಿಷೇಧ ಮತ್ತು ಈರುಳ್ಳಿ ಹಾಗೂ ಸೋಯಾಬೀನ್ ರೈತರ ಮೇಲೆ ಹೆಚ್ಚಿನ ರಫ್ತು ಸುಂಕದ ಹೊರೆ ಮತ್ತು ಹತ್ತಿ ಹಾಗೂ ಕಬ್ಬು ಉತ್ಪಾದನೆಯಲ್ಲಿ ಭಾರಿ ಕುಸಿತ, ರೈತರನ್ನು ಸಂಕಷ್ಟಕ್ಕೆ ತಳ್ಳಿದೆ ಎಂದು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ರಾಜ್ಯದ ಹಾಲು ಸಹಕಾರಿ ಸಂಘಗಳು ಬಿಕ್ಕಟ್ಟಿಗೆ ಸಿಲುಕಿದ್ದು, ಇದನ್ನು ಸರ್ಕಾರವೇ ಒಪ್ಪಿಕೊಂಡಿದೆ ಎಂದು ಖರ್ಗೆ ಕಿಡಿಕಾರಿದ್ದಾರೆ.