Tuesday, October 22, 2024
HomeBusinessPam Kaur: HSBC 160 ವರ್ಷ ಇತಿಹಾಸದಲ್ಲಿ ಮೊದಲ ಮಹಿಳಾ CFO

Pam Kaur: HSBC 160 ವರ್ಷ ಇತಿಹಾಸದಲ್ಲಿ ಮೊದಲ ಮಹಿಳಾ CFO

London: UK ಮೂಲದ HSBC bank ನ 159 ವರ್ಷ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳೆಯೊಬ್ಬರು ಎಕ್ಸಿಕ್ಯೂಟಿವ್ ಹುದ್ದೆ ಅಲಂಕರಿಸಿದ್ದಾರೆ. ಅದೂ ಭಾರತದ ಮೂಲದ ಮಹಿಳೆಯೇ ಈ ಗೌರವ ಪಡೆದಿರುವುದು. ಪಂಜಾಬ್ ಸಂಜಾತೆಯಾದ ಪಾಮ್ ಕೌರ್ (Pam Kaur) ಅವರು HSBC ಹೋಲ್ಡಿಂಗ್ಸ್​ನ CFO ಆಗಿ ನೇಮಕವಾಗಿದ್ದಾರೆ.

ಹಲವು ಜಾಗತಿಕ ಪ್ರಮುಖ ಸಂಸ್ಥೆಗಳಿಗೆ ಭಾರತ ಮೂಲದ ಸಿಇಒಗಳೇ ಹಲವರಿದ್ದಾರೆ. ಪಾಮ್ ಕೌರ್ (Pam Kaur) ಹೊಸ ಇತಿಹಾಸ ನಿರ್ಮಿಸಿದ್ದಾರೆ. ಯೂರೋಪ್ನ ಅತಿದೊಡ್ಡ ಬ್ಯಾಂಕ್ ಎನಿಸಿರುವ HSBC ಸ್ಥಾಪನೆಯಾಗಿ 159 ವರ್ಷವಾಗಿದೆ.

ಹದಿನಾರು ದಶಕಗಳಷ್ಟು ಸುದೀರ್ಘ ಇತಿಹಾಸ ಇರುವ HSBCಯಲ್ಲಿ ಮೊದಲ ಬಾರಿಗೆ ಮಹಿಳೆಯೊಬ್ಬರು ಎಕ್ಸಿಕ್ಯೂಟಿವ್ ಹುದ್ದೆ ಪಡೆದಿದ್ದಾರೆ. ಅದೂ ಆ ಸಾಧನೆ ಬಂದಿದ್ದು ಭಾರತ ಮೂಲದ ವ್ಯಕ್ತಿಯಿಂದ ಎಂಬುದು ಹೆಮ್ಮೆಯ ವಿಚಾರ.

ಈ ಮುಂಚೆ ಸಿಎಫ್ಒ ಆಗಿದ್ದ ಜಾರ್ಜಸ್ ಎಲೆಡೆರಿ (Georges Elhedery) ಅವರು ಸಿಇಒ ಆಗಿ ಜವಾಬ್ದಾರಿ ಪಡೆದಿದ್ದರು. ಈ ವರ್ಷದಿಂದ ಸಿಎಫ್ಒ ಸ್ಥಾನ ಹಾಗೇ ಉಳಿದುಕೊಂಡಿತ್ತು.

- Advertisement -

2013 ರಿಂದಲೂ HSBC ಸಂಸ್ಥೆಯಲ್ಲೇ ಕೆಲಸ ಮಾಡುತ್ತಿರುವ ಪಾಮ್ ಕೌರ್ ಅವರ ಹೆಸರನ್ನು ಜಾರ್ಜಸ್ ಅವರೇ ಸೂಚಿಸಿದ್ದರು. ಅಕ್ಟೋಬರ್ 22, ಇಂದು ಕೌರ್ ಸಿಎಫ್ಒ ಆಗಿ ನೇಮಕವಾಗಿದ್ದಾರೆ.

ಪಂಜಾಬ್​ನಲ್ಲಿ ಹುಟ್ಟಿದ ಪಾಮ್ ಕೌರ್ ಅವರು ಪಂಜಾಬ್ ಯೂನಿವರ್ಸಿಟಿಯಿಂದ ಬಿಕಾಂ ಮತ್ತು ಎಂಬಿಎ ಮಾಡಿದ್ದಾರೆ. ಇಂಗ್ಲೆಂಡ್​ನಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಓದಿದ್ದಾರೆ.

ಸಿಟಿ ಗ್ರೂಪ್, ಡಾಯ್ಷೆ ಬ್ಯಾಂಕ್ ಮೊದಲಾದ ಬ್ಯಾಂಕುಗಳಲ್ಲಿ ಗ್ರೂಪ್ ಆಡಿಟ್​ನ ಮುಖ್ಯ ಹುದ್ದೆಗಳನ್ನು ನಿಭಾಯಿಸಿದ್ದಾರೆ. ರಾಯಲ್ ಬ್ಯಾಂಕ್ ಆಫ್ ಸ್ಕಾಟ್ಲ್ಯಾಂಡ್ ಗ್ರೂಪ್​ನಲ್ಲಿ ಸಿಎಫ್ಒ ಮತ್ತು ಸಿಒಒ ಹುದ್ದೆ ಕೂಡ ಹೊಂದಿದ್ದರು.

HSBC ಹೋಲ್ಡಿಂಗ್ಸ್​ನ ಸಿಎಫ್ಒ ಸ್ಥಾನಕ್ಕೆ ಹಲವರ ಹೆಸರು ಚಾಲನೆಯಲ್ಲಿದ್ದವು. ಸಂಸ್ಥೆಯ ಒಳಗೆ ಹೊರಗೆ ಅಭ್ಯರ್ಥಿಗಳನ್ನು ಆ ಸ್ಥಾನಕ್ಕೆ ಪರಿಶೀಲಿಸಲಾಗಿತ್ತು. ಆದರೆ, ಆ ಸ್ಥಾನಕ್ಕೆ ಪಾಮ್ ಕೌರ್ ಅವರು ಸೂಕ್ತ ಎನಿಸಿತು ಎಂದು ಜಾರ್ಜಸ್ ಎಲೆಡೆರಿ ಹೇಳಿದ್ದಾರೆ.

For Daily Updates WhatsApp ‘HI’ to 7406303366

RELATED ARTICLES

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
- Advertisment -

Most Popular

Karnataka

India

You cannot copy content of this page