back to top
29.1 C
Bengaluru
Wednesday, February 25, 2026
HomeMoviesTeluguಚಿತ್ರರಂಗದಲ್ಲಿ ದಾಖಲೆ ಬರೆದ Actor Prabhas

ಚಿತ್ರರಂಗದಲ್ಲಿ ದಾಖಲೆ ಬರೆದ Actor Prabhas

- Advertisement -
- Advertisement -

ಟಾಲಿವುಡ್ (Tollywood) ನಟ ಪ್ರಭಾಸ್‌ಗೆ (Prabhas) ಇದೀಗ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಅಕ್ಟೋಬರ್ 23ಕ್ಕೆ ಅವರ ಜನ್ಮದಿನ. ದಕ್ಷಿಣ ಭಾರತದಲ್ಲಿ ತಮ್ಮದೇ ಆದ ಹೆಸರು ಮಾಡಿಕೊಂಡು, ದೇಶಾದ್ಯಂತ ಹೆಸರು ಮಾಡಿದ್ದಾರೆ.

ಬಾಕ್ಸ್ ಆಫೀಸ್‌ನಲ್ಲಿ ನಟ ಪ್ರಭಾಸ್ ಅವರ ಸಿನಿಮಾಗಳು ಮಾಡಿದ ಮೋಡಿಯೂ ಸಣ್ಣದೇನಲ್ಲ. ಹಲವು ದಾಖಲೆಗಳನ್ನೂ ಸೃಷ್ಟಿಸಿದ್ದಾರೆ.

ಪ್ರಭಾಸ್ ಅವರ ಸಿನಿಮಾಗಳು ತಮ್ಮ ಸಿನಿಮಾಗಳ ದಾಖಲೆಯನ್ನೇ ದಿನದಿಂದ ದಿನಕ್ಕೆ ಮುರಿದು ಮುನ್ನಡೆಯುತ್ತಿವೆ. ‘ಬಾಹುಬಲಿ: ದಿ ಬಿಗಿನಿಂಗ್’ ಮೊದಲ ದಿನ ₹ 75 ಕೋಟಿ ಗಳಿಸಿತು.

ಇದರ ನಂತರ ‘ಬಾಹುಬಲಿ: ದಿ ಕನ್ಕ್ಲೂಷನ್’, ಬಾಕ್ಸ್ ಆಫೀಸ್‌ನಲ್ಲಿ ಬೆರಗುಗೊಳಿಸುವ ಮೂಲಕ ಮೊದಲ ದಿನ 200 ಕೋಟಿ ರೂಪಾಯಿ ಗಳಿಸಿತು.

‘ಸಾಹೋ’ ಮೊದಲ ದಿನ 130 ಕೋಟಿ ರೂಪಾಯಿ ಗಳಿಸಿದರೆ, ಸಲಾರ್ 178 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು. ‘ಕಲ್ಕಿ 2898 AD’ 180 ಕೋಟಿ ರೂಪಾಯಿ ಗಳಿಸಿ ಗಲ್ಲಾಪೆಟ್ಟಿಗೆಯಲ್ಲಿ ಸೂಪರ್ ಹಿಟ್ ಆಯಿತು.

ದೇಶಿಯ ಮಾರುಕಟ್ಟೆಯಲ್ಲಿ ಮಾತ್ರವಲ್ಲದೆ, ವಿದೇಶದಲ್ಲಿಯೂ ಪ್ರಭಾಸ್ ಸಿನಿಮಾಗಳಿಗೆ ಬೇಡಿಕೆ ಇವೆ. ‘ಬಾಹುಬಲಿ 2: ದಿ ಕನ್ಕ್ಲೂಷನ್’ ಸಿನಿಮಾ ವಿದೇಶದಲ್ಲಿ 396.5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದರೆ, ಕಲ್ಕಿ ಅಂತರಾಷ್ಟ್ರೀಯ ಮಟ್ಟದಲ್ಲಿ 275.4 ಕೋಟಿ ರೂಪಾಯಿ ಗಳಿಸಿದೆ.

‘ಸಲಾರ್: ಭಾಗ 1 ಸೀಸ್ ಫೈರ್ 137.8 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಅದೇ ರೀತಿ ಸಾಹೋ ಸಿನಿಮಾ 78.5 ಕೋಟಿ ರೂಪಾಯಿ ಗಳಿಸಿತು. ಈ ಮೂಲಕ ಗಡಿ ಮೀರಿ ಮುಂದಡಿ ಇರಿಸಿದ್ದಾರೆ ಪ್ರಭಾಸ್.

‘ಸ್ಪಿರಿಟ್’ ಹಿಂದಿ ಚಿತ್ರರಂಗದಲ್ಲಿ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಏಕೆಂದರೆ ಪ್ರಭಾಸ್ ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರೊಂದಿಗೆ ಕೈ ಜೋಡಿಸಿದ್ದಾರೆ. ಈ ಸಿನಿಮಾ ಸಹ ಬಹು ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಲಿದೆ.

ಸದ್ಯ ಪ್ರಭಾಸ್ ಮಾರುತಿ ನಿರ್ದೇಶನದ “ದಿ ರಾಜಾಸಾಬ್” ಸಿನಿಮಾದಲ್ಲಿ ಬಿಜಿಯಾಗಿದ್ದಾರೆ. ಈ ಸಿನಿಮಾವನ್ನು ಪೀಪಲ್ ಮೀಡಿಯಾ ಫ್ಯಾಕ್ಟರಿ ನಿರ್ಮಿಸುತ್ತಿದೆ. ಈ ಚಿತ್ರದಲ್ಲಿ ಪ್ರಭಾಸ್ ಶೀರ್ಷಿಕೆ ಪಾತ್ರದಲ್ಲಿ ನಟಿಸಿದರೆ, ನಿಧಿ ಅಗರ್ವಾಲ್ ಮತ್ತು ಮಾಳವಿಕಾ ಮೋಹನನ್ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page