Home Sports Cricket ಹಳೆಯ ವಿಶ್ವ ದಾಖಲೆ ಮುರಿದ New Zealand ಕ್ರಿಕೆಟಿಗ Chad Bowes

ಹಳೆಯ ವಿಶ್ವ ದಾಖಲೆ ಮುರಿದ New Zealand ಕ್ರಿಕೆಟಿಗ Chad Bowes

270
New Zealand Cricket Player Chad Bowes

ನ್ಯೂಝಿಲೆಂಡ್ ಕ್ರಿಕೆಟಿಗ ಚಾಡ್ ಬೋವ್ಸ್ (New Zealand cricketer Chad Bowes) ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಕೂಡ ಸ್ಪೋಟಕ ದ್ವಿಶತಕ ಸಿಡಿಸುವ ಮೂಲಕ ಎಂಬುದು ವಿಶೇಷ.

ಅಂದರೆ ಲಿಸ್ಟ್ ಎ (List A cricket) ಕ್ರಿಕೆಟ್ ಇತಿಹಾಸದಲ್ಲೇ (history) ಅತೀ ವೇಗವಾಗಿ ಡಬಲ್ ಸೆಂಚುರಿ ಸಿಡಿಸಿದ ವಿಶ್ವ ದಾಖಲೆ ಇದೀಗ ಚಾಡ್ ಬೋವ್ಸ್ (Chad Bowes) ಪಾಲಾಗಿದೆ.

ನ್ಯೂಝಿಲೆಂಡ್​ನಲ್ಲಿ ನಡೆಯುತ್ತಿರುವ ಫೋರ್ಡ್ ಟ್ರೋಫಿ ಟೂರ್ನಿಯಲ್ಲಿ ಬೋವ್ಸ್ ಈ ವಿಶ್ವ ದಾಖಲೆ ನಿರ್ಮಿಸಿದ್ದಾರೆ. 50 ಓವರ್ಗಳ ಈ ಪಂದ್ಯದಲ್ಲಿ ಕ್ಯಾಂಟರ್ಬರಿ ಮತ್ತು ಒಟಾಗೋ ತಂಡಗಳು ಮುಖಾಮುಖಿಯಾಗಿದ್ದವು. ಕ್ಯಾಂಟರ್ಬರಿ ಪರ ಆರಂಭಿಕನಾಗಿ ಕಣಕ್ಕಿಳಿದ ಚಾಡ್ ಬೋವ್ಸ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದರು.

ಕೇವಲ 103 ಎಸೆತಗಳಲ್ಲಿ ದ್ವಿಶತಕ ಪೂರೈಸಿದರು. ಈ ಮೂಲಕ ಲಿಸ್ಟ್ ಎ ಕ್ರಿಕೆಟ್ ಇತಿಹಾಸದಲ್ಲೇ ಅತೀ ವೇಗವಾಗಿ ಡಬಲ್ ಸೆಂಚುರಿ ಸಿಡಿಸಿದ ವಿಶ್ವ ದಾಖಲೆಯನ್ನು ಚಾಡ್ ಬೋವ್ಸ್ ತಮ್ಮದಾಗಿಸಿಕೊಂಡರು.

ಇದಕ್ಕೂ ಮುನ್ನ ಈ ದಾಖಲೆ ಭಾರತದ ಎನ್ ಜಗದೀಸನ್ ಹಾಗೂ ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ ಹೆಸರಿನಲ್ಲಿತ್ತು. ಈ ಇಬ್ಬರು ಲಿಸ್ಟ್ ಎ ಕ್ರಿಕೆಟ್​ನಲ್ಲಿ 114 ಎಸೆತಗಳಲ್ಲಿ ದ್ವಿಶತಕ ಬಾರಿಸಿ ಇತಿಹಾಸ ನಿರ್ಮಿಸಿದ್ದರು. ಇದೀಗ ಈ ದಾಖಲೆ ಮುರಿಯುವಲ್ಲಿ ಚಾಡ್ ಬೋವ್ಸ್ ಯಶಸ್ವಿಯಾಗಿದ್ದಾರೆ.

ಹಾಗೆಯೇ ಈ ದ್ವಿಶತಕದೊಂದಿಗೆ ನ್ಯೂಝಿಲೆಂಡ್ ಕ್ರಿಕೆಟ್ ಇತಿಹಾಸದಲ್ಲೇ ಸೀಮಿತ ಓವರ್ಗಳ ಪಂದ್ಯಗಳಲ್ಲಿ ದ್ವಿಶತಕ ಬಾರಿಸಿದ ಮೂರನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ ಜೇಮಿ ಹೌ (2013 ಫೋರ್ಡ್ ಟ್ರೋಫಿ- 222 ರನ್ಸ್) ಮತ್ತು ಮಾರ್ಟಿನ್ ಗಪ್ಟಿಲ್ (2015 ಏಕದಿನ ವಿಶ್ವಕಪ್- 237* ರನ್ಸ್) ಮಾತ್ರ ಕಿವೀಸ್ ಪರ ಡಬಲ್ ಸೆಂಚುರಿ ಸಿಡಿಸಿದ್ದರು.

ಇದೀಗ 205 ರನ್ ಸಿಡಿಸುವ ನಂತರ ಚಾಡ್ ಬೋವ್ಸ್ ಈ ಸಾಧನೆ ಮಾಡಿದ ನ್ಯೂಝಿಲೆಂಡ್ನ ಮೂರನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page