ನವೆಂಬರ್ 1 ರಂದು ರೋಹಿತ್ ಶೆಟ್ಟಿ (Rohit Shetty) ನಿರ್ದೇಶನ ಮಾಡಿ ಸಹ ನಿರ್ಮಾಪಕರೂ ಆಗಿರುವ ‘Singham Again’ ಸಿನಿಮಾ ಬಿಡುಗಡೆ ಆಗುತ್ತಿದೆ. ಅದೇ ದಿನ ಬಾಲಿವುಡ್ನ (Bollywood) ಜನಪ್ರಿಯ ಸಿನಿಮಾ ಸರಣಿ ‘ಭೂಲ್ ಭುಲಯ್ಯ’ ದ ಮೂರನೇ ಭಾಗ ‘Bhool Bhulayya 3’ ಬಿಡುಗಡೆ ಆಗುತ್ತಿದೆ.
ಆದರೆ ರೋಹಿತ್ ಶೆಟ್ಟಿ ತಮ್ಮ ಸಿನಿಮಾವನ್ನು ನಿಯಮಬಾರಿವಾಗಿ, ಸ್ಪರ್ಧಾ ಸ್ಪೂರ್ತಿ ಮರೆತು ಬಿಡುಗಡೆ ಹಾಗೂ ವಿತರಣೆ ಮಾಡುತ್ತಿದ್ದಾರೆ ಎಂದು ‘ಭೂಲ್ ಭುಲಯ್ಯ 3’ ಸಿನಿಮಾದ ನಿರ್ಮಾಣ ಸಂಸ್ಥೆಯಾದ ಟಿ-ಸೀರೀಸ್ (T-Series) ಆರೋಪ ಮಾಡಿದೆ.
ಅಲ್ಲದೆ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಿಗೂ ಸಹ ಎಲ್ಲ ಶೋ ಅನ್ನು ‘ಸಿಂಘಂ ಅಗೇನ್’ಗೆ ನೀಡುವಂತೆ ರೋಹಿತ್ ಶೆಟ್ಟಿ ಮತ್ತು ತಂಡ ಸೂಚನೆ ನೀಡಿದ್ದು, ಹಲವು ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ‘ಸಿಂಘಂ ಸಿನಿಮಾವನ್ನು ಮಾತ್ರವೇ ಪ್ರದರ್ಶಿಸುತ್ತಿವೆ. ‘ಭೂಲ್ ಭುಲಯ್ಯ 3’ಗೆ ಕೆಲವು ಕಡೆ ಕೇವಲ ಅರ್ಲಿ ಮಾರ್ನಿಂಗ್ ಶೋ ಅನ್ನಷ್ಟೆ ನೀಡಲಾಗಿದೆಯಂತೆ.
ಈ ಅನ್ಯಾಯದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಟಿ-ಸೀರೀಸ್, ಸಿಸಿಐ (ಕಾಂಪಿಟೇಶನ್ ಕಮಿಷನ್ ಆಫ್ ಇಂಡಿಯಾ)ಕ್ಕೆ ದೂರು ನೀಡಿದೆ. ಅಸ್ಪರ್ಧಾತ್ಮಕ ವಿಧಾನದ ಮೂಲಕ ವ್ಯಾಪಾರ ಮಾಡಲಾಗುತ್ತಿದೆ. ಸಿಸಿಐ ಮಧ್ಯಸ್ಥಿಕೆವಹಿಸಿ 50-50ರ ಅನುಪಾತದಲ್ಲಿ ಸ್ಕ್ರೀನ್ಗಳ ವಿತರಣೆಗೆ ಪಿವಿಆರ್-ಐನಾಕ್ಸ್ಗೆ ಸೂಚಿಸಬೇಕು ಎಂದು ಮನವಿ ಮಾಡಿದೆ.