Search
WhatsApp alerts

Home › Business

Ratan Tata ಬಳಿಕ Noel ಟಾಟಾ Chairman ಆಗಲು ಸಾಧ್ಯವಿಲ್ಲ?

administrator · Published

Noel Tata Chairman Tata Trust

Mumbai: ರತನ್ ಟಾಟಾ (Ratan Tata) ಬಳಿಕ ಟಾಟಾ ಗ್ರೂಪ್​ಗೆ ನೋಯಲ್ (Noel Tata) ಅವರೇ ವಾರಸುದಾರರಾಗಿದ್ದಾರೆ. ಟಾಟಾ ಟ್ರಸ್ಟ್​ಗಳಿಗೆ (Tata Trust) ನೋಯಲ್ ಅವರೇ ಛೇರ್ಮನ್ ಆಗಿದ್ದಾರೆ.

ಆದರೆ, ಟಾಟಾದ ಬಿಸಿನೆಸ್ ನಿಯಂತ್ರಿಸುವುದು ಟಾಟಾ ಸನ್ಸ್ ಸಂಸ್ಥೆ (Tata Sons Chairman). ಟಾಟಾ ಸನ್ಸ್​ನ ನಿಯಂತ್ರಣ ಟಾಟಾ ಟ್ರಸ್ಟ್​ ಕೈಯಲ್ಲಿದೆ.

ಆದರೂ ಕೂಡ ನೋಯಲ್ ಟಾಟಾ ಅವರು ಟಾಟಾ ಸನ್ಸ್ ಛೇರ್ಮನ್ (Tata Sons Chairman) ಆಗಲು ಸದ್ಯಕ್ಕೆ ಸಾಧ್ಯವಿಲ್ಲ. ಎರಡು ವರ್ಷದ ಹಿಂದೆ ಟಾಟಾ ಸನ್ಸ್ ಸಂವಿಧಾನದಲ್ಲಿ ಮಾಡಲಾದ ಕೆಲ ನಿಯಮ ಬದಲಾವಣೆಗಳು ಇದಕ್ಕೆ ಕಾರಣ ಎನ್ನಲಾಗಿದೆ.

ಟಾಟಾ ಸಂಸ್ಥೆಗಳ ಮಧ್ಯೆ ಹಿತಾಸಕ್ತಿ ಸಂಘರ್ಷವಾಗದಂತೆ ನಿಯಂತ್ರಿಸಲು ಟಾಟಾ ಸನ್ಸ್ ಸಂಸ್ಥೆಯ ಕಾನೂನುಗಳಲ್ಲಿ ಒಂದಷ್ಟು ಬದಲಾವಣೆ ಮಾಡಲಾಯಿತು. ಅದರ ಪ್ರಕಾರ, ಒಬ್ಬರೇ ವ್ಯಕ್ತಿ ಏಕಕಾಲದಲ್ಲಿ ಟಾಟಾ ಟ್ರಸ್ಟ್ಸ್ ಮತ್ತು ಟಾಟಾ ಸನ್ಸ್ ಛೇರ್ಮನ್ ಆಗುವಂತಿಲ್ಲ.

ರತನ್ ಟಾಟಾ ಅವರು 2016ರಲ್ಲಿ ಟಾಟಾ ಸನ್ಸ್ ಛೇರ್ಮನ್ ಸ್ಥಾನದಿಂದ ಇಳಿಯುವ ಮುನ್ನ ಎರಡೂ ಸಂಸ್ಥೆಗಳಿಗೆ ಛೇರ್ಮನ್ ಆಗಿದ್ದರು. ಅದಾದ ಬಳಿಕ ಎರಡಕ್ಕೂ ಒಬ್ಬ ವ್ಯಕ್ತಿಯೇ ಮುಖ್ಯಸ್ಥರಾಗಿದ್ದಿಲ್ಲ.

ಸದ್ಯ ಟಾಟಾ ಸನ್ಸ್ ಛೇರ್ಮನ್ ಸ್ಥಾನದಲ್ಲಿ ಎನ್ ಚಂದ್ರಶೇಖರನ್ ಇದ್ದಾರೆ. ಕುತೂಹಲ ಎಂದರೆ ಟಾಟಾ ಕುಟುಂಬದ ಹೊರಗಿನ ವ್ಯಕ್ತಿಯೊಬ್ಬರು ಆ ಸ್ಥಾನ ಅಲಂಕರಿಸಿರುವುದು ಇದೇ ಮೊದಲು.

ರತನ್ ಟಾಟಾ ಅವರ ತಂದೆ ನವಲ್ ಟಾಟಾ ಅವರ ಎರಡನೇ ಪತ್ನಿಯ ಮಗ ಈ ನೋಯಲ್ ಟಾಟಾ. ನವಲ್ ಟಾಟಾ ಮೊದಲು ಸೋನೂ ಎಂಬಾಕೆಯನ್ನು ಮದುವೆಯಾಗಿದ್ದರು.

ಅವರಿಗೆ ಹುಟ್ಟಿದವರು ರತನ್ ಮತ್ತು ಜಿಮ್ಮಿ ಟಾಟಾ. ಸೋನೂಗೆ ಡಿವೋರ್ಸ್ ಕೊಟ್ಟ ಬಳಿಕ ನವಲ್ ಅವರು ಸಿಮೋನ್​ರನ್ನು ಮದುವೆಯಾದರು. ಅವರಿಗೆ ಹುಟ್ಟಿದವರು ನೋಯಲ್ ಟಾಟಾ.

2019ರಲ್ಲಿ ನೋಯಲ್ ಟಾಟಾ ಅವರನ್ನು ಸರ್ ರತನ್ ಟಾಟಾ ಟ್ರಸ್ಟ್​ನ ಟ್ರಸ್ಟಿ ಆಗಿ ಮಾಡಲಾಯಿತು. ಆಗಲೂ ನೋಯಲ್ ಬಗ್ಗೆ ನಿರೀಕ್ಷೆಗಳೆದ್ದವು.

2022ರಲ್ಲಿ ಟಾಟಾ ಗ್ರೂಪ್​ನ ಇನ್ನೊಂದು ಪ್ರಮುಖ ಟ್ರಸ್ಟ್ ಆದ ಸರ್ ದೊರಾಬ್​ಜಿ ಟಾಟಾ ಟ್ರಸ್ಟ್​ಗೆ ನೋಯಲ್ ಟ್ರಸ್ಟೀ ಆದರು. ಈಗ ಎರಡೂ ಟ್ರಸ್ಟ್​ಗಳಿಗೂ ನೋಯಲ್ ಟಾಟಾ ಛೇರ್ಮನ್ ಆಗಿದ್ದಾರೆ.

ಟಾಟಾ ಗ್ರೂಪ್​ನ ಸಂಪೂರ್ಣ ನಿಯಂತ್ರಣ ಟಾಟಾ ಟ್ರಸ್ಟ್​ಗೆ ಇದೆ. ಇದು ಟಾಟಾ ಗ್ರೂಪ್​ನ ಪವರ್ ಸೆಂಟರ್ ಆದರೂ ರಿಯಲ್ ಪವರ್ ಇರುವುದು ಟಾಟಾ ಸನ್ಸ್​ನಲ್ಲಿ.

ಟಾಟಾ ಗ್ರೂಪ್​ನ ಮೇಲೆ ಒಬ್ಬನೇ ವ್ಯಕ್ತಿ ಏಕಸ್ವಾಮ್ಯ ಸಾಧಿಸಬಾರದು ಎಂಬ ಉದ್ದೇಶದಿಂದಲೋ ಏನೋ ಟಾಟಾ ಸನ್ಸ್​ನ ಕಾನೂನಿನಲ್ಲಿ 2022ರಲ್ಲಿ ಬದಲಾವಣೆ ಮಾಡಲಾಗಿದೆ.

For Daily Updates WhatsApp ‘HI’ to 7406303366

Read next

ಕೊಲುಮೇನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸ್ಟಾಫ್ ನರ್ಸ್ ಹುದ್ದೆ: ನವೆಂಬರ್ 25ರ ಒಳಗೆ ಅರ್ಜಿ

ಕುಂಬಾರ ಸಮುದಾಯಗಳ ಅಭಿವೃದ್ಧಿ ನಿಗಮದ ಯೋಜನೆಗಳಿಗೆ ಅರ್ಜಿ ಆಹ್ವಾನ: ಡಿಸೆಂಬರ್ 16 ಕೊನೆಯ ದಿನ

ಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮದ ಯೋಜನೆಗಳಿಗೆ ಅರ್ಜಿ ಆಹ್ವಾನ: ಡಿಸೆಂಬರ್ 16 ಕೊನೆಯ ದಿನ

ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಿರಿ: ಚಿಕ್ಕಬಳ್ಳಾಪುರದಲ್ಲಿ ಮಕ್ಕಳ ವಿಜ್ಞಾನ ಸಮಾವೇಶ

You cannot copy content of this page