ಕನ್ನಡ ಸಿನಿಮಾಗಳನ್ನು (Kannada movies) OTTಗಳು ಖರೀದಿ ಮಾಡುತ್ತಿಲ್ಲ ಎಂಬ ದೂರು ಕಳೆದ ಕೆಲ ವರ್ಷಗಳಿಂದಲೂ ಕೇಳಿ ಬರುತ್ತಲೇ ಇದೆ. ಕನ್ನಡ ಸಿನಿಮಾಗಳನ್ನು OTTಗಳು ತಾತ್ಸಾರದಿಂದ ನೋಡುತ್ತವೆ.
ಒಟಿಟಿಗಳಿಗೆ ಹೆಚ್ಚು ಸಬ್ಸ್ಕ್ರೈಬರ್ಗಳು (subscribers) ಇರುವುದು ಕರ್ನಾಟಕದಲ್ಲಿಯೇ (Karnataka) ಆದರೆ ಅವರು ಕನ್ನಡ ಸಿನಿಮಾಗಳನ್ನು ಮಾತ್ರ ಖರೀದಿ ಮಾಡಿ ಪ್ರದರ್ಶನ ಮಾಡುವುದಿಲ್ಲ ಎಂಬ ದೂರು ಇದೆ.
ಕನ್ನಡಿಗರಿಗೆ ಕನ್ನಡದ್ದೇ ಆದ ಒಟಿಟಿ ನಿರ್ಮಾಣ ಆಗಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದಲೂ ಇದೆ. ಕೆಲವು ಪ್ರಯತ್ನಗಳು ಈ ನಿಟ್ಟಿನಲ್ಲಿ ಆಗಿವೆಯಾದರೂ ದೊಡ್ಡ ಯಶಸ್ಸು ದೊರೆತಿಲ್ಲ. ಇದೀಗ ಕನ್ನಡದ್ದೇ ಆದ ಹೊಸ ಒಟಿಟಿ ವೇದಿಕೆಯೊಂದು ಬಿಡುಗಡೆ ಆಗಿದೆ.
‘ಒಟಿಟಿ ಪ್ಲೇಯರ್’ ಹೆಸರಿನ ಹೊಸ ಒಟಿಟಿ ಬಿಡುಗಡೆ ಮಾಡಲಾಗಿದೆ. ಆದರೆ ಇದು ಆಪ್ ಮಾದರಿಯ ಒಟಿಟಿ ಅಲ್ಲ, ಬದಲಿಗೆ ವೆಬ್ಸೈಟ್ ಆಗಿದೆ. ಅತ್ಯಂತ ಕಡಿಮೆ ಮೊತ್ತದಲ್ಲಿ ವೆಬ್ಸೈಟ್ಗೆ ಹೋಗಿ ಸಿನಿಮಾ ವೀಕ್ಷಣೆ ಮಾಡಬಹುದಾಗಿದೆ.
ಹಾರ್ಲೀ ಎಂಟರ್ ಟೈನ್ ಮೆಂಟ್ ಮೀಡಿಯಾ ಸಂಸ್ಥೆ ಅಡಿಯಲ್ಲಿ ಗೀತಾ ಕೃಷ್ಣನ್ ರಾವ್ ಹಾಗೂ ಮುರಳಿರಾವ್ ಅವರು ಈ ವೆಬ್ ಸೈಟ್ ಅಭಿವೃದ್ಧಿಪಡಿಸಿದ್ದಾರೆ. ಇದರ ಮೂಲಕ ಯಾವುದೇ ಅಡೆತಡೆಗಳಿಲ್ಲದೆ, ಜಾಹೀರಾತು ಮುಕ್ತವಾಗಿ ತಮ್ಮ ನೆಚ್ಚಿನ ಚಲನಚಿತ್ರಗಳನ್ನು ವೀಕ್ಷಿಸಬಹುದಾಗಿದೆ.
ನಮ್ಮ ವೆಬ್ ಸೈಟ್ ಗೆ ಲಾಗಿನ್ ಆಗಿ ಅಲ್ಪದರ ಪಾವತಿಸಿ ಹೊಸ ಚಿತ್ರಗಳನ್ನು ನೋಡಬಹುದು. ಇದನ್ನು ಆನ್ ಲೈನ್ ಥೇಟರ್ ಅನ್ನಬಹುದು. ಬಂದ ಹಣದಲ್ಲಿ ನಿರ್ಮಾಪಕರಿಗೆ 70% ಶೇರ್ ಕೊಡುತ್ತೇವೆ. ಅಲ್ಲದೆ ಉತ್ತಮ ಕಿರು ಚಿತ್ರಗಳನ್ನು ಕೂಡ ನಮ್ಮ ವೆಬ್ ಸೈಟ್ ಬಿಡುಗಡೆ ಮಾಡುತ್ತೇವೆ’ ಎಂದು ವಿವರಿಸಿದರು.
ಒಟಿಟಿ ಪ್ಲೇಯರ್ನಲ್ಲಿ ಕೆಲ ಕನ್ನಡ ಸಿನಿಮಾಗಳು, ಕನ್ನಡ ಕಿರುಚಿತ್ರಗಳನ್ನು ಪ್ರದರ್ಶಿಸಲಾಗಿದೆ. ಕೆಲವು ಇಂಗ್ಲೀಷ್ ಸಿನಿಮಾಗಳನ್ನೂ ಸಹ ಪ್ರದರ್ಶಿಸಲಾಗುತ್ತಿದೆ. ಹಲವು ಸಿನಿಮಾಗಳ ಶೀಘ್ರವೇ ಬರಲಿವೆ ಎಂದು ಜಾಹೀರಾತು ಹಾಕಲಾಗಿದೆ.