Bengaluru: ಜಾಗತಿಕ ಆಧ್ಯಾತ್ಮಿಕ ಗುರು, ಮಾನವತಾವಾದಿ ನಾಯಕ ಶ್ರೀ ರವಿಶಂಕರ್ ಗುರೂಜಿಗೆ (Sri Sri Ravi Shankar) ದಕ್ಷಿಣ ಪೆಸಿಫಿಕ್ ರಾಷ್ಟ್ರವಾದ ಫಿಜಿ (Fiji) ತನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು (civilian award) ನೀಡಿ ಗೌರವಿಸಿದೆ. ಮಾನವ ಸ್ಫೂರ್ತಿಯನ್ನು ನಿರಂತರವಾಗಿ ಎತ್ತಿ ಹಿಡಿಯುವ ನಿಟ್ಟಿನಲ್ಲಿ ಅವರು ಮಾಡುತ್ತಿರುವ ವಿವಿಧ ಸಮುದಾಯಗಳನ್ನು ಶಾಂತಿ ಮತ್ತು ಸಾಮರಸ್ಯದ ಮೂಲಕ ಒಂದಾಗಿಸುವ ಅವರ ಕಾರ್ಯಕ್ಕಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ.
ರವಿಶಂಕರ್ ಗುರೂಜಿಗೆ “ಹಾನರರಿ ಆಫಿಸರ್ ಆಫ್ ದಿ ಆರ್ಡರ್ ಆಫ್ ಫೀಜಿ” (Honorary Officer of the Order of Fiji) ಬಿರುದನ್ನು ಫಿಜಿ ರೀಪಬ್ಲಿಕ್ನ ಅಧ್ಯಕ್ಷ ವಿಲ್ಲಿಯಮೆ ಕಟೋನಿವೆರಿ (Wiliame Katonivere) ಅವರು ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಆ ಮೂಲಕ ರವಿಶಂಕರ್ ಗುರೂಜಿಗೆ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ನೀಡುವತ್ತಿರುವ ಆರನೇ ದೇಶವಾಗಿ ಫಿಜಿ ಹೊರಹೊಮ್ಮದೆ.
ಆರ್ಟ್ ಆಫ್ ಲಿವಿಂಗ್ (Art of Living) ಮೂಲಕ ರವಿಶಂಕರ್ ಗುರೂಜಿ ಕಳೆದ 43 ವರ್ಷಗಳಿಂದ ಜನ ಸಮೂಹಕ್ಕೆ ಸಂತೋಷ ಮತ್ತು ಸಾಮರಸ್ಯವನ್ನು ಹರಡುತ್ತಿದ್ದಾರೆ.
ಇದರೊಂದಿಗೆ ಅವರು ಮಾನಸಿಕ ಆರೋಗ್ಯ, ಶಿಕ್ಷಣ, ಪರಿಸರ, ಮಹಿಳಾ ಹಾಗೂ ಯುವಕ ಸಬಲೀಕರಣ, ಒತ್ತಡ ನಿವಾರಣೆ, ಧ್ಯಾನ ಹೀಗೆ ಅನೇಕಾನೇಕ ಕ್ಷೇತ್ರಗಳಲ್ಲಿ ಅವರು ನಿರ್ವಹಿಸುತ್ತಿರುವ ಕಾರ್ಯಗಳಿಗಾಗಿ ಈ ಪ್ರಶಸ್ತಿ ನೀಡಲಾಗಿದೆ.
ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಈ ದ್ವೀಪ ರಾಷ್ಟ್ರದಲ್ಲಿ ಯುವಕ ಸಬಲೀಕರಣ, ಸ್ಥಳೀಯ ಸಮುದಾಯಗಳ ಮಾನಸಿಕ ಆರೋಗ್ಯದ ಸುಧಾರಣೆ, ಕಾಲಾತೀತ ಜ್ಞಾನವಾದ ಆಯುರ್ವೇದದ ಜ್ಞಾನದ ಪರಿಚಯದ ಮೂಲಕ ಸಮಗ್ರ ಬೆಳವಣಿಗೆಗೆ ಆರ್ಟ್ ಆಫ್ ಲಿವಿಂಗ್ ಹೇಗೆ ಕಾಣಿಕೆ ನೀಡಬಹುದೆಂದು ಚರ್ಚಿಸಿದ್ದಾರೆ.