Chikkaballapur : ಚಿಕ್ಕಬಳ್ಳಾಪುರ ನಗರ ಹೊರವಲಯ ಹೊನ್ನೇನಹಳ್ಳಿ ಬಳಿ ಅಕ್ರಮವಾಗಿ 20 ಹಸುಗಳನ್ನು (Cow) ಟ್ರಕ್‌ನಲ್ಲಿ ಹೊರ ರಾಜ್ಯಗಳಿಗೆ ಸಾಗಿಸಲಾಗುತ್ತಿದೆ (Illegal Transport) ಎಂದು ಆರೋಪಿಸಿ ಬಜರಂಗದಳದ (Bajarang Dal) ಕಾರ್ಯಕರ್ತರು ಸೋಮವಾರ ಹಸುಗಳನ್ನು ರಕ್ಷಿಸಿ (Rescue) ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಈ ಸಂದರ್ಭದಲ್ಲಿ ಬಜರಂಗದಳದ ಕಾರ್ಯಕರ್ತ ಮನೋಜ್ ಮಾತನಾಡಿ “ರೈತರ ಸೋಗಿನಲ್ಲಿ ಅಕ್ರಮವಾಗಿ ರಾಸುಗಳನ್ನು ಕಸಾಯಿಖಾನೆಗೆ ಸಾಗಿಸಲಾಗುತ್ತಿತ್ತು. ಹಲವು ರಾಸುಗಳು ಸಾಯುವ ಪರಿಸ್ಥಿತಿಗೆ ತಲುಪಿವೆ. ಶನಿವಾರವಷ್ಟೇ ಹಿಂದೂಪರ ಸಂಘಟನೆಯ ಕಾರ್ಯಕರ್ತರು 17 ಎಮ್ಮೆಗಳನ್ನ ಕಸಾಯಿಖಾನೆಗೆ ಸಾಗಿಸಲಾಗುತ್ತಿದ್ದ ವಾಹನವನ್ನು ತಾಲ್ಲೂಕಿನ ಮರಸನಹಳ್ಳಿ ಬಳಿ ತಡೆದು ಪೊಲೀಸರ ವಶಕ್ಕೆ ಒಪ್ಪಿಸಿದ್ದರು.ಪೊಲೀಸರು ಪ್ರತಿ ವಾಹನವನ್ನು ಪರಿಶೀಲಿಸಿ, ಕಠಿಣ ಕ್ರಮಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಜರಂಗದಳ ಮತ್ತು ಹಿಂದೂಪರ ಕಾರ್ಯಕರ್ತರು ಉಪಸ್ಥಿತರಿದ್ದರು.
For Daily Updates WhatsApp ‘HI’ to 7406303366
The post ಅಕ್ರಮವಾಗಿ ಸಾಗಿಸುತ್ತಿದ್ದ 20 ಹಸುಗಳ ರಕ್ಷಣೆ appeared first on Chikkaballapur | Chikballapur | Chikkaballapura | ಚಿಕ್ಕಬಳ್ಳಾಪುರ ಸುದ್ದಿ.