ವಕ್ಫ್ ಬೋರ್ಡ್ ನೋಟಿಸ್ (Waqf Board notice) ಜಾರಿ ಮಾಡಿದ್ದರಿಂದ ರೈತ ರುದ್ರಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ (Social Media) ಪೋಸ್ಟ್ ಮಾಡಿದ್ದಕ್ಕಾಗಿ BJP ಸಂಸದ ತೇಜಸ್ವಿ ಸೂರ್ಯ (MP Tejasvi Surya) ವಿರುದ್ಧ ಹಾವೇರಿ ಸೇನ್ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
ಅಧಿಕೃತ ದಾಖಲೆಗಳಲ್ಲಿ ರೈತರ ಭೂಮಿಯನ್ನು ವಕ್ಫ್ ಎಂದು ಗುರುತಿಸಲಾಗಿದ್ದು, ಇದು ಆತ್ಮಹತ್ಯೆಗೆ ಕಾರಣವಾಯಿತು ಎಂದು ಸೂರ್ಯ ಅವರ ಪೋಸ್ಟ್ ಆರೋಪಿಸಿದೆ.
ಆದರೆ, ಹಾವೇರಿ ಜಿಲ್ಲಾಡಳಿತ ಮತ್ತು ಪೊಲೀಸರು ರೈತನ ಆತ್ಮಹತ್ಯೆಗೆ ಸಾಲಬಾಧೆ ಕಾರಣವಾಗಿದ್ದು, ಯಾವುದೇ ವಕ್ಫ್ ನೋಟಿಸ್‌ಗೆ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ವಕ್ಫ್ ನೋಟಿಸ್‌ನಿಂದ ರೈತ ಆತ್ಮಹತ್ಯೆ ಪ್ರಕರಣ ವದಂತಿಗೆ ಹಾವೇರಿ ಜಿಲ್ಲಾಡಳಿತ ಸ್ಪಷ್ಟನೆ ಕೊಟ್ಟಿದೆ. ವಕ್ಫ್ ನೋಟಿಸ್‌ನಿಂದ ರೈತ ಆತ್ಮಹತ್ಯೆ ಮಾಡಿಕೊಂಡಿಲ್ಲ. ಆತ ಸಾಲಬಾಧೆಯಿಂದ ಆತ್ಮಹತ್ಯೆಗೆ ಶರಣಾಗಿದ್ದ ಎಂದು ಸ್ಪಷ್ಟಪಡಿಸಿದೆ.