Bengaluru: ಸಚಿವ ಜಮೀರ್ ಅಹಮದ್ ಖಾನ್ (Zameer Ahmed Khan) ಹೇಳಿಕೆ Congress ಪಕ್ಷದಲ್ಲಿ ಸಂಚಲನ ಮೂಡಿಸಿದ್ದು, ಅದರಲ್ಲೂ ಚನ್ನಪಟ್ಟಣದಲ್ಲಿ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಫಲಿತಾಂಶ ಪೂರ್ವ ಹೇಳಿಕೆ ನೀಡಿರುವುದು ತೀವ್ರ ಸಂಚಲನ ಮೂಡಿಸಿದೆ.
ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದ ಜಮೀರ್, ನನ್ನ ಅವರು ಕುಳ್ಳ ಅಂತಾರೆ ಎಂದಿದ್ರು. ಇದಕ್ಕೆ ತಿರುಗೇಟು ಕೊಟ್ಟಿರೋ HDK, ನಾನು ಯಾವತ್ತೂ ಜಮೀರ್‌ರನ್ನ ಕುಳ್ಳ ಎಂದಿಲ್ಲ ಎಂದಿದ್ದಾರೆ. ಇನ್ನೂ ಡಿ.ಕೆ ಸುರೇಶ್, ಕರಿಯಾ ಅಂದ್ರೆ ಏನ್ ಮಾಡೋಕಾಗುತ್ತೆ ಅಂತೇಳೋ ಮೂಲಕ ಜಮೀರ್ ಹೇಳಿಕೆಯಿಂದ ಎಫೆಕ್ಟ್ ಆಗಿಲ್ಲ ಅನ್ನೋ ಅರ್ಥದಲ್ಲಿ ಮಾತನಾಡಿದ್ದಾರೆ.
ಇನ್ನೂ ದೇವೇಗೌಡರ ಕುಟುಂಬವನ್ನ ಖರೀದಿ ಮಾಡುವ ತಾಕತ್ತಿದೆ ಎಂಬ ಹೇಳಿಕೆಯಿಂದಲೂ ಹಿನ್ನೆಡೆಯಾಯ್ತು ಎಂಬ ಚರ್ಚೆಯೂ ಆಗುತ್ತಿದೆ. ಈ ಬಗ್ಗೆ ವಾಗ್ದಾಳಿ ನಡೆಸಿರುವ ಹೆಚ್‌ಡಿಕೆ, ಇದೆಲ್ಲ ದುಡ್ಡಿನ ಮದ ಎಂದು ತಿವಿದಿದ್ದಾರೆ. ಇದಕ್ಕೂ ಸಮರ್ಥನೆ ನೀಡಿರೋ ಡಿಕೆ ಸುರೇಶ್, ಆ ರೀತಿಯಾಗಿ ಜಮೀರ್ ಹೇಳಿಲ್ಲ ಎಂದಿದ್ದಾರೆ
ಯೋಗೇಶ್ವರ್ ಅವರ ಹೇಳಿಕೆಯನ್ನು ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರು ಗಂಭೀರವಾಗಿ ಪರಿಗಣಿಸಬಾರದು ಎಂದು ಹೇಳಿದ್ದಾರೆ. ಆದರೆ, ಈಗ ಪ್ರಚಾರದಲ್ಲಿ ಜಮೀರ್ ತೊಡಗಿಸಿಕೊಳ್ಳುವುದರ ಬಗ್ಗೆ ಚರ್ಚೆಗಳು ಕೇಂದ್ರೀಕೃತವಾಗಿವೆ.
ಕೆಲವರು ಅವರ ಹೇಳಿಕೆಗಳಿಗೆ ಉಲ್ಟಾ ಹೊಡೆದಿದ್ದಾರೆ, ವಿಶೇಷವಾಗಿ ದೇವೇಗೌಡರ ಕುಟುಂಬದ ಆರೋಪಗಳಿಗೆ ಸಂಬಂಧಿಸಿದಂತೆ. ಈ ಕಾಮೆಂಟ್‌ಗಳು ಕಾಂಗ್ರೆಸ್‌ನಲ್ಲಿ ಮತ್ತಷ್ಟು ವಿವಾದವನ್ನು ಹೆಚ್ಚಿಸಿವೆ.
ಜಮೀರ್ ರಾಜೀನಾಮೆಗೆ ಒತ್ತಾಯಿಸಿ ನೆಲಮಂಗಲದಲ್ಲಿ ಒಕ್ಕಲಿಗ ಸಮುದಾಯದಿಂದ ಪ್ರತಿಭಟನೆ ನಡೆದಿದೆ. ಉದ್ವಿಗ್ನತೆ ಹೆಚ್ಚುತ್ತಿದ್ದು, ಜಮೀರ್ ಮತ್ತು ಯೋಗೇಶ್ವರ್ ಹೇಳಿಕೆಯಿಂದ ಉಂಟಾದ ಹಾನಿಯನ್ನು ನಿಯಂತ್ರಿಸಲು ಕಾಂಗ್ರೆಸ್ ಈಗ ಹರಸಾಹಸ ಮಾಡುತ್ತಿದೆ.
ಚನ್ನಪಟ್ಟಣದ ಅಂತಿಮ ಚುನಾವಣಾ ಫಲಿತಾಂಶ ಈ ಬೆಳವಣಿಗೆಗಳ ರಾಜಕೀಯ ಪರಿಣಾಮವನ್ನು ಬಯಲು ಮಾಡಲಿದೆ.