New Delhi: “ಹಿಂದಿನ ಸರ್ಕಾರಗಳು ವೋಟ್ ಬ್ಯಾಂಕ್ ರಾಜಕೀಯದತ್ತ ನೋಟವನ್ನು ಹೊಂದಿದ್ದರೆ, ನಮ್ಮ ಸರ್ಕಾರ ಜನರ ನಂಬಿಕೆಯನ್ನು ಪುನಃಸ್ಥಾಪಿಸುವ ಕಾರ್ಯದಲ್ಲಿ ತೊಡಗಿಸಿದೆ” ಎಂದು PM Narendra Modi ಶನಿವಾರ ಹೇಳಿದರು.
HT ನಾಯಕತ್ವ ಶೃಂಗಸಭೆಯಲ್ಲಿ ಮಾತನಾಡಿದ ಪ್ರಧಾನಿ, “ನಮ್ಮ ಸರ್ಕಾರವು ಜನರ, ಜನರಿಂದ, ಜನರಿಗಾಗಿ ಪ್ರಗತಿಯ ಮಂತ್ರವನ್ನು ಅನುಸರಿಸುತ್ತಿದೆ. ಪ್ರತಿ ಚುನಾವಣೆಗೂ ಕೆಲವು ದೇಶಗಳಲ್ಲಿ ಸರ್ಕಾರಗಳು ಬದಲಾಗುತ್ತಿವೆ, ಆದರೆ ಭಾರತದಲ್ಲಿ ಜನರು ಮೂರನೇ ಬಾರಿಗೆ ನಮ್ಮನ್ನು ಆಯ್ಕೆ ಮಾಡಿದ್ದಾರೆ. ಇದರಿಂದ ಜನರ ನಂಬಿಕೆ ನಮ್ಮ ಮೇಲೆ ಇರುವುದನ್ನು ತೋರಿಸುತ್ತದೆ” ಎಂದು ಹೇಳಿದರು.
“ಭಾರತವು ಈಗ ಅಭೂತಪೂರ್ವ ಆಕಾಂಕ್ಷೆಗಳಿಂದ ತುಂಬಿದೆ. ಈ ಆಶಯಗಳನ್ನು ನೀತಿಗಳ ಅಡಿಪಾಯವಾಗಿ ಹೊಂದುವ ಮೂಲಕ ನಾವು ದೇಶವನ್ನು ಮುನ್ನಡೆಸುತ್ತಿದ್ದೇವೆ. ಕಳೆದ 10 ವರ್ಷಗಳಲ್ಲಿ ಗ್ಯಾಸ್ ಸಂಪರ್ಕಗಳ ವಿತರಣೆಯಲ್ಲಿ ನಾವು 70 ವರ್ಷಗಳ ಸಾಧನೆಯನ್ನು ಮೀರಿಸಿದ್ದೇವೆ. ನಮ್ಮ ಉದ್ದೇಶವು ಜನರಿಗಾಗಿ ಖರ್ಚು ಮಾಡುವುದು” ಎಂದರು.
ಮುಂಬೈನ 26/11 ದಾಳಿ ನೆನಪಿಸುತ್ತಾ, “ಇಂದು ಭಯೋತ್ಪಾದಕರು ತಮ್ಮ ಮನೆಗಳಲ್ಲೂ ಅಸುರಕ್ಷಿತವಾಗಿರುವ ಭಾವನೆ ಹೊಂದಿದ್ದಾರೆ. ಈಗ ಕಾಲ ಬದಲಾಗಿದೆ” ಎಂದು ಪ್ರಧಾನಿಯವರು ಹೇಳಿದರು.