back to top
19.1 C
Bengaluru
Sunday, July 20, 2025
HomeKarnatakaBengaluru Urbanಅನರ್ಹ BPL ಕಾರ್ಡ್‌ಗಳು ರದ್ದು: CM Siddaramaiah

ಅನರ್ಹ BPL ಕಾರ್ಡ್‌ಗಳು ರದ್ದು: CM Siddaramaiah

- Advertisement -
- Advertisement -

Bengaluru: “ಅನರ್ಹ BPL ಕಾರ್ಡ್‌ಗಳನ್ನು ಮಾತ್ರ ರದ್ದುಪಡಿಸಲಾಗುತ್ತದೆ. ಬಡವರಿಗೆ ಅಕ್ಕಿಯ ಹಕ್ಕು ತಪ್ಪಿಸುವ ಪ್ರಶ್ನೆಯೇ ಇಲ್ಲ” ಎಂದು ಮುಖ್ಯಮಂತ್ರಿ (CM Siddaramaiah) ಸಿದ್ಧರಾಮಯ್ಯ ಸ್ಪಷ್ಟಪಡಿಸಿದರು.

ಶಾಸಕರ ಭವನದ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ತಮ್ಮ ಅಭಿಪ್ರಾಯಗಳನ್ನು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಹಂಚಿಕೊಂಡರು. “2017ರಲ್ಲಿ 1 ರೂಪಾಯಿಗೆ ನೀಡುತ್ತಿದ್ದ ಅಕ್ಕಿಯನ್ನು ಉಚಿತ ಮಾಡಿದ್ದು ನಮ್ಮ ಸರ್ಕಾರ. ಇದನ್ನು ಬಿಜೆಪಿ ಅಥವಾ ಜೆಡಿಎಸ್ ಜಾರಿಗೆ ತರುವ ಪ್ರಶ್ನೆಯೇ ಇಲ್ಲ. ಇಂತಹ ಯೋಜನೆಗಳು ಗುಜರಾತ್, ಮಧ್ಯಪ್ರದೇಶ, ಬಿಹಾರ, ಉತ್ತರ ಪ್ರದೇಶ ಅಥವಾ ಹರಿಯಾಣದಲ್ಲಿ ಜಾರಿಯಲ್ಲಿವೆವೇ? ಕರ್ನಾಟಕದ ಹೆಸರಿನಲ್ಲಿ ಸುಮ್ಮನೆ ಮಾತನಾಡುವುದು ಬೇಡ” ಎಂದರು.

ಕೇಂದ್ರ ಸರ್ಕಾರದ ಟೀಕೆ:

“ರಾಜ್ಯದಿಂದ ₹4.50 ಲಕ್ಷ ಕೋಟಿ ತೆರಿಗೆ ಕೇಂದ್ರಕ್ಕೆ ಕಳುಹಿಸುತ್ತೇವೆ, ಆದರೆ ₹59 ಸಾವಿರ ಕೋಟಿ ಮಾತ್ರ ಹಿಂದಿರುಗುತ್ತದೆ. ಉಳಿದ ಹಣವನ್ನು ರಾಜ್ಯಕ್ಕೆ ನೀಡಬೇಕಾದ ಉತ್ತರದ ಸರ್ಕಾರ ಏನು ಮಾಡುತ್ತಿದೆ? ನಬಾರ್ಡ್‌ ಮೂಲಕ ಕಳೆದ ವರ್ಷ ₹5,600 ಕೋಟಿ ಸಾಲ ನೀಡಿದ್ದರೆ, ಈ ಬಾರಿ ಕೇವಲ ₹2,340 ಕೋಟಿ ಮಾತ್ರ. ಇದು ಕರ್ನಾಟಕದ ವಿರುದ್ಧದ ಅನ್ಯಾಯವಲ್ಲವೇ?” ಎಂದು ಕೇಂದ್ರ ಸರ್ಕಾರದ ನಡೆ ಬಗ್ಗೆ ಪ್ರಶ್ನೆ ಮಾಡಿದರು.

ಸಿದ್ದರಾಮಯ್ಯನವರು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದು, ರೈತರಿಗೆ ಅನ್ಯಾಯ ಮಾಡಬೇಡಿ ಎಂದು ಒತ್ತಾಯಿಸಿದ್ದಾರೆ. “ನಾನು ಅಧಿಕಾರಕ್ಕೆ ಬಂದ ಬಳಿಕ 5 ಲಕ್ಷದವರೆಗೆ ಬಡ್ಡಿರಹಿತ ಸಾಲ ಮತ್ತು 15 ಲಕ್ಷದವರೆಗೆ ಶೇ 3ರ ದರದಲ್ಲಿ ಸಾಲದ ವ್ಯವಸ್ಥೆ ಮಾಡಿದ್ದೇನೆ” ಎಂದು ಹೇಳಿದರು.

ಕುಮಾರಸ್ವಾಮಿ ಮತ್ತು BJP ಯ ವಿರುದ್ಧ ಕಿಡಿ:

“15ನೇ ಹಣಕಾಸು ಆಯೋಗದಡಿಯಲ್ಲಿ ಘೋಷಣೆ ಮಾಡಿದ ₹11,595 ಕೋಟಿ ನೆರವು ರಾಜ್ಯಕ್ಕೆ ಎಲ್ಲಿ ಬಂದಿದೆ? ಭದ್ರಾ ಮೇಲ್ದಂಡೆ ಯೋಜನೆಗೆ ₹5,300 ಕೋಟಿ ಅನುದಾನ ಘೋಷಿಸಿದ್ದರು, ಅದನ್ನು ಯಾವ ಸ್ಥಿತಿಯಲ್ಲಿ ಉಳಿಸಿದ್ದಾರೆ?” ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮತ್ತು ಬಿಜೆಪಿ ನಾಯಕರನ್ನು ಪ್ರಶ್ನಿಸಿದರು.

ಮಹಾರಾಷ್ಟ್ರದ ವಿರುದ್ಧ ಕಾನೂನು ಹೋರಾಟ:

ಮಹಾರಾಷ್ಟ್ರ ಸರ್ಕಾರದ ಸುಳ್ಳು ಜಾಹೀರಾತುಗಳ ಬಗ್ಗೆ ಕಿಡಿಕಾರಿದ ಸಿದ್ದರಾಮಯ್ಯ, “ಕರ್ನಾಟಕ ಜನರನ್ನು ದಾರಿ ತಪ್ಪಿಸಲು ಆ ರಾಜ್ಯ ಸರ್ಕಾರವು ಮೂರ್ಖತನದ ಜಾಹೀರಾತುಗಳನ್ನು ನೀಡುತ್ತಿದೆ. ಈ ಕುರಿತು ಕಾನೂನು ಹೋರಾಟ ನಡೆಸಲು ಸರ್ಕಾರ ತೀರ್ಮಾನಿಸಿದೆ” ಎಂದು ಸ್ಪಷ್ಟನೆ ನೀಡಿದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page