back to top
24.3 C
Bengaluru
Saturday, July 19, 2025
HomeKarnatakaಆಪರೇಷನ್ BPL ಕಾರ್ಡ್: 22 ಲಕ್ಷ Ration Card ರದ್ದುಪಡಿಸುವ ನಿರೀಕ್ಷೆ

ಆಪರೇಷನ್ BPL ಕಾರ್ಡ್: 22 ಲಕ್ಷ Ration Card ರದ್ದುಪಡಿಸುವ ನಿರೀಕ್ಷೆ

- Advertisement -
- Advertisement -

Bengaluru: ಕರ್ನಾಟಕ ಸರ್ಕಾರ ಅನರ್ಹ ರೇಷನ್ ಕಾರ್ಡ್‌ಗಳನ್ನು (BPL card) ರದ್ದುಪಡಿಸಲು ಕಠಿಣ ಕ್ರಮ ಕೈಗೊಂಡಿದೆ.

“ಆಪರೇಷನ್ BPL ಕಾರ್ಡ್” ಹೆಸರಿನ ಈ ಪ್ರಕ್ರಿಯೆಯಲ್ಲಿ, ಈಗಾಗಲೇ ಹಲವು ಜಿಲ್ಲೆಗಳಲ್ಲಿ ಲಕ್ಷಾಂತರ ಬಿಪಿಎಲ್ (BPL) ಕಾರ್ಡ್‌ಗಳು ಪರಿಶೀಲನೆಯಾಗುತ್ತಿವೆ.

ಈ ವಿಚಾರದಿಂದ ಮನೆಮನೆಗೂ ತಮ್ಮ ಬಿಪಿಎಲ್ ಕಾರ್ಡ್‌ಗಳು ಅರ್ಹವೋ ಅಥವಾ ಅನರ್ಹವೋ ಎಂಬ ಚರ್ಚೆ ಆರಂಭವಾಗಿದೆ.

ಪ್ರಮುಖ ಅಂಕಿಅಂಶಗಳು

  • ರಾಜ್ಯದಲ್ಲಿ 22,62,482 ಅನರ್ಹ ಬಿಪಿಎಲ್ ಕಾರ್ಡ್‌ಗಳನ್ನು ಪತ್ತೆ ಮಾಡಲಾಗಿದೆ.
  • ಅನರ್ಹತೆಗೆ ಒಳಪಡುವ ಅಂತ್ಯೋದಯ/ಬಿಪಿಎಲ್ ಕಾರ್ಡ್ ಸಂಖ್ಯೆ: 10,97,621
  • ಆದಾಯ ತೆರಿಗೆ ಪಾವತಿದಾರರು: 1,06,152
  • 1 ಲಕ್ಷದ 20 ಸಾವಿರದ ಒಳಗಾದ ಆದಾಯ ಹೊಂದಿರುವವರು: 10,54,368
  • ಸರ್ಕಾರಿ ನೌಕರರು: 4,272

ಇ-ಗವರ್ನೆನ್ಸ್ ಇಲಾಖೆ ಈ ಮಾಹಿತಿ ಸಂಗ್ರಹಿಸಿ ಆಹಾರ ಇಲಾಖೆಗೆ ರವಾನೆ ಮಾಡಿದೆ. ಜಿಲ್ಲಾವಾರು ಅನರ್ಹ BPL ಕಾರ್ಡ್‌ಗಳ ಮಾಹಿತಿಯು ಎಲ್ಲಾ ಜಿಲ್ಲಾ ಅಧಿಕಾರಿಗಳಿಗೆ ನೀಡಲಾಗಿದೆ.

ಆಹಾರ ಇಲಾಖೆ ಆಯುಕ್ತರು ಈ ಮಾಹಿತಿಯನ್ನು ಜಂಟಿ ನಿರ್ದೇಶಕರು ಮತ್ತು ಉಪ ನಿರ್ದೇಶಕರಿಗೆ ಕಳುಹಿಸಿ, ರದ್ದುಗೊಳಿಸುವ ಪ್ರಕ್ರಿಯೆ ಆರಂಭಿಸಲು ಸೂಚಿಸಿದ್ದಾರೆ.

ಸರ್ಕಾರದ ಈ ಕ್ರಮದಿಂದ ಅನರ್ಹ ಕಾರ್ಡ್‌ಗಳನ್ನು ಬೇಗ ರದ್ದುಪಡಿಸುವ ನಿರೀಕ್ಷೆಯಿದೆ.

For Daily Updates WhatsApp ‘HI’ to 7406303366


- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page