back to top
25.7 C
Bengaluru
Wednesday, December 4, 2024
HomeSportsCricketVirat Kohli: ದಾಖಲೆಗಳ ಮೇಲೆ ದಾಖಲೆ

Virat Kohli: ದಾಖಲೆಗಳ ಮೇಲೆ ದಾಖಲೆ

- Advertisement -
- Advertisement -

ಭಾರತ ಮತ್ತು ಆಸ್ಟ್ರೇಲಿಯಾ (India and Australia) ನಡುವೆ 5 ಪಂದ್ಯಗಳ ಟೆಸ್ಟ್ ಸರಣಿ ನ.22ರಿಂದ ಶುರುವಾಗಲಿದೆ. ಮೊದಲ ಪಂದ್ಯ ಪರ್ತ್​ನ (Perth) ಒಪ್ಟಸ್​ ಸ್ಟೇಡಿಯಂನಲ್ಲಿ (Optus Stadium) ನಡೆಯಲಿದ್ದು, ಈ ಸರಣಿಯ ಮೂಲಕ ವಿರಾಟ್ ಕೊಹ್ಲಿ (Virat Kohli) ಹಲವಾರು ದಾಖಲೆಗಳನ್ನು ನಿರ್ಮಿಸಬಹುದು.

ಈಗಾಗಲೇ ಹಲವು ದಾಖಲೆಗಳನ್ನು ಹೊಂದಿರುವ ವಿರಾಟ್, ಈ ಸರಣಿಯ ಐದು ಪಂದ್ಯಗಳ ಮೂಲಕ ವಿರಾಟ್ ಕೊಹ್ಲಿಗೆ ಹಲವು ದಾಖಲೆಗಳನ್ನು ಬರೆಯಲು ಉತ್ತಮ ಅವಕಾಶವಿದೆ.ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 1,809 ರನ್ ಗಳಿಸಿರುವ ಸಚಿನ್ ತೆಂಡೂಲ್ಕರ್ ದಾಖಲೆ ಮುರಿಯಲು ಕೊಹ್ಲಿ ಗೆ ಕೇವಲ 458 ರನ್ ಬೇಕಾಗಿದೆ.

ದಾಖಲೆಗಳ ಪಟ್ಟಿ

  • ಅತ್ಯಧಿಕ ಶತಕ: ಕೊಹ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಈಗಾಗಲೇ 6 ಶತಕಗಳನ್ನು ಬಾರಿಸಿದ್ದಾರೆ. ಈ ಸರಣಿಯಲ್ಲಿ 4 ಸೆಂಚುರಿ ಸಿಡಿಸಿದರೆ, ಇಂಗ್ಲೆಂಡ್‌ನ ಜಾಕ್ ಹಾಬ್ಸ್ (9) ದಾಖಲೆಯನ್ನು ಮುರಿಯಬಹುದು.
  • ಅಡಿಲೇಡ್ ಸ್ಟೇಡಿಯಂ ವಿಶೇಷ: ಅಡಿಲೇಡ್‌ನಲ್ಲಿ 93 ರನ್ ಗಳಿಸಿದರೆ, ಅಲ್ಲಿ ಅತ್ಯಧಿಕ ರನ್ ಬಾರಿಸಿದ ವಿದೇಶಿ ಆಟಗಾರ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಲಿದ್ದಾರೆ.
  • 3500 ರನ್ ಗಡಿ: ಆಸ್ಟ್ರೇಲಿಯಾದಲ್ಲಿ 74 ರನ್ ಸಿಡಿಸಿದರೆ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 3500 ರನ್ ಗಡಿಯನ್ನು ಮುಟ್ಟಲಿದ್ದಾರೆ.
  • ಅತಿ ಹೆಚ್ಚು ಶತಕ ಒಂದು ಮೈದಾನದಲ್ಲಿ: ಅಡಿಲೇಡ್‌ನಲ್ಲಿ ಒಂದು ಶತಕ ಬಾರಿಸಿದರೆ, ಒಂದು ಮೈದಾನದಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ವಿದೇಶಿ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ.
  • ಅತಿ ಹೆಚ್ಚು ಬೌಂಡರಿ: ಟೆಸ್ಟ್ ಕ್ರಿಕೆಟ್‌ನಲ್ಲಿ 209 ಬೌಂಡರಿಗಳ ದಾಖಲೆ ಹೊಂದಿರುವ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಮುರಿಯಲು ಕೊಹ್ಲಿಗೆ 59 ಬೌಂಡರಿ ಬೇಕಾಗಿದೆ.
  • 100 ಅಂತಾರಾಷ್ಟ್ರೀಯ ಪಂದ್ಯಗಳು: ಸಚಿನ್ ತೆಂಡೂಲ್ಕರ್ 100 ಅಂತಾರಾಷ್ಟ್ರೀಯ ಪಂದ್ಯಗಳ ದಾಖಲೆ ಹೊಂದಿದ್ದಾರೆ. ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ 3 ಪಂದ್ಯಗಳಲ್ಲಿ ಆಡಿದರೆ ಈ ದಾಖಲೆಯನ್ನು ಸರಿಗಟ್ಟಲಿದ್ದಾರೆ.
  • ಅತ್ಯಧಿಕ ಶತಕಗಳು: ಸಚಿನ್ 20 ಶತಕಗಳ ದಾಖಲೆಯನ್ನು ಹೊಂದಿದ್ದು, ಕೊಹ್ಲಿಗೆ 5 ಶತಕಗಳು ಬೇಕಾಗಿದೆ ಈ ದಾಖಲೆ ಮುರಿಯಲು.
  • ಅತ್ಯಧಿಕ ಕ್ಯಾಚ್‌ಗಳು: ಅಗತ್ಯ 4 ಕ್ಯಾಚ್‌ಗಳನ್ನು ಹಿಡಿದರೆ, 70 ಕ್ಯಾಚ್ಗಳ ಹೊಸ ದಾಖಲೆ ರಚಿಸಬಹುದು.
  • 500 ಬೌಂಡರಿ ಗಡಿ: ವಿರಾಟ್ 4 ಬೌಂಡರಿ ಬಾರಿಸಿದರೆ 500 ಗಡಿಯನ್ನು ತಲುಪಲಿದ್ದಾರೆ.

ವಿರಾಟ್ ಕೊಹ್ಲಿ ಈ ಸರಣಿಯಲ್ಲಿ ಕಿಂಗ್ ಕೊಹ್ಲಿ ಎಂಬ ಬಿರುದನ್ನು ಮತ್ತೊಮ್ಮೆ ಸಾಬೀತು ಮಾಡುವ ನಿರೀಕ್ಷೆಯಾಗಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!

You cannot copy content of this page