ಕಳೆದ ಕೆಲ ದಿನಗಳಿಂದ ಪಡಿತರ ಚೀಟಿ ಪರಿಷ್ಕರಣೆ (Ration Card) ಕರ್ನಾಟಕದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಜನತೆ ಬಿಪಿಎಲ್ (BPL) ಕಾರ್ಡ್ ರದ್ದು ಹಾಗೂ ಎಪಿಎಲ್ (APL) ಕಾರ್ಡ್‌ಗೆ ಸೇರ್ಪಡೆಯ ಬಗ್ಗೆ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಮತ್ತು DCM ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಸದ್ಯ 1,50,59,431 ಪಡಿತರ ಚೀಟಿಗಳಲ್ಲಿ 1,02,509 ಕಾರ್ಡ್ಗಳನ್ನು ಪರಿಷ್ಕರಣೆ ಮಾಡಲಾಗಿದೆ. ಉಳಿದ BPL ಮತ್ತು APL ಚೀಟಿಗಳನ್ನು ಯಥಾಸ್ಥಿತಿಯಲ್ಲಿ ಉಳಿಸಲು ನಿರ್ಧಾರವಾಗಿದೆ.
ಅನರ್ಹ BPL ಕಾರ್ಡ್ಗಳನ್ನು APLಗೆ ಸೇರಿಸಲಾಗಿದೆ. ತಾತ್ಕಾಲಿಕವಾಗಿ ಅಮಾನತ್ತು ಮಾಡಲಾಗಿದ್ದು, ಮರುಪರಿಶೀಲನೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುತ್ತದೆ.
ಬಿಪಿಎಲ್‌ಗೆ ಅರ್ಹರಾಗಿದ್ದರೂ APLಗೆ ಸೇರಿದ್ದರೆ, ಅವರನ್ನು ಮರುಪರಿಶೀಲಿಸಿ ಪುನಃ BPL ಕಾರ್ಡ್ ನೀಡಲಾಗುತ್ತದೆ. BPL ಕಾರ್ಡ್ ರದ್ದುಗೊಂಡಿರುವ ಫಲಾನುಭವಿಗಳಿಗೆ ಹೊಸ ಅರ್ಜಿ ಸಲ್ಲಿಸಲು ಒಂದು ವಾರದ ಕಾಲಾವಕಾಶ ನೀಡಲಾಗಿದೆ.
ಡಿಕೆ ಶಿವಕುಮಾರ್ ಜನರಿಗೆ ಭರವಸೆ ನೀಡಿದ್ದು, ಯಾವುದೇ BPL ಅರ್ಹರಿಗೆ ಅನ್ಯಾಯವಾಗುವುದಿಲ್ಲ. ಈ ಸಂಬಂಧ ತಾಲೂಕು ಮತ್ತು ರಾಜ್ಯಮಟ್ಟದ ಸಮಿತಿಗಳನ್ನು ನೇಮಿಸಲಾಗಿದೆ.
ಸರ್ಕಾರ ಮಾನವೀಯ ಪರಿಕಲ್ಪನೆ ಉಳ್ಳ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದು, ಎಲ್ಲಾ ಫಲಾನುಭವಿಗಳ ಕಠಿಣತೆಗೆ ಸ್ಪಂದಿಸುವ ಭರವಸೆ ನೀಡಿದೆ.