ಭಾರತದಲ್ಲಿ 2024 ರ ಜನವರಿ 1 ರಿಂದ ಟೆಲಿಕಾಂ ಕ್ಷೇತ್ರದಲ್ಲಿ (Telecom rules) ಪ್ರಮುಖ ಬದಲಾವಣೆಯಾಗಲಿದೆ. ರಿಲಯನ್ಸ್ ಜಿಯೋ, ಭಾರ್ತಿ ಏರ್ಟೆಲ್, ವೊಡಾಫೋನ್ ಐಡಿಯಾ (VI) ಮತ್ತು BSNL (Reliance Jio, Bharti Airtel, Vodafone Idea (VI) and BSNL) ಸೇರಿದಂತೆ ಎಲ್ಲಾ ಟೆಲಿಕಾಂ ಕಂಪೆನಿಗಳ ಮೇಲೆ ಹೊಸ ನಿಯಮಗಳು ಪರಿಣಾಮ ಬೀರುವುದಾಗಿದೆ. ಈ ನಿಯಮಗಳು, ದೇಶಾದ್ಯಂತ ಆಪ್ಟಿಕಲ್ ಫೈಬರ್ ಲೈನ್‌ಗಳು ಮತ್ತು ಟೆಲಿಕಾಂ ಟವರ್‌ಗಳ ಸ್ಥಾಪನೆಯನ್ನು ಸುಲಭಗೊಳಿಸಲು ರೂಪಿತವಾಗಿದೆ.
“ರೈಟ್ ಆಫ್ ವೇ” (RoW-Right of Way) ಎಂದು ಕರೆಯುವ ಹೊಸ ನಿಯಮಗಳನ್ನು ಹೊರಡಿಸಲಾಗಿದ್ದು, ಇದು 5G ತಂತ್ರಜ್ಞಾನವನ್ನು ಹೆಚ್ಚಿಸಲು ಸಹಾಯಕವಾಗಲಿದೆ. ದೂರಸಂಪರ್ಕ ಇಲಾಖೆಯ ಕಾರ್ಯದರ್ಶಿ ನೀರಜ್ ಮಿತ್ತಲ್ ಈ ನಿಯಮಗಳನ್ನು ದೇಶಾದ್ಯಾಂತ ಸುಲಭವಾಗಿ ಅನುಸರಿಸಲು ಪ್ರತಿಪಾದಿಸಿದ್ದಾರೆ.
ಟೆಲಿಕಾಂ ಮೂಲಸೌಕರ್ಯವನ್ನು ವೇಗವಾಗಿ ಅಭಿವೃದ್ಧಿಪಡಿಸಲು, ರಾಜ್ಯಗಳಿಗೆ ಈ ನಿಯಮಗಳನ್ನು ಅನುಸರಿಸಲು ತಿಳಿಸಲಾಗಿದೆ. ಇದು ಪಾರದರ್ಶಕತೆಯನ್ನು ಹೆಚ್ಚಿಸಿ, ಟೆಲಿಕಾಂ ಕಂಪೆನಿಗಳಿಗೆ ಅಭಿವೃದ್ಧಿಯನ್ನು ಸುಲಭಗೊಳಿಸುವುದಕ್ಕೆ ಸಹಾಯ ಮಾಡುತ್ತದೆ.
ಜನವರಿ 1 ರಿಂದ ಜಾರಿಗೆ ಬರುವ ಹೊಸ ನಿಯಮಗಳನ್ನು ಎಲ್ಲಾ ರಾಜ್ಯಗಳು ಏಕರೂಪವಾಗಿ ಕಾರ್ಯಗತಗೊಳಿಸಬೇಕು, ಟೆಲಿಕಾಂ ಆಪರೇಟರ್‌ಗಳು ಮತ್ತು ಮೂಲಸೌಕರ್ಯ ಪೂರೈಕೆದಾರರಿಗೆ ಟೆಲಿಕಾಂ ಟವರ್‌ಗಳನ್ನು ನಿರ್ವಹಿಸಲು ಮತ್ತು ಸ್ಥಾಪಿಸಲು ಮತ್ತು ಆಪ್ಟಿಕಲ್ ಫೈಬರ್ ಹಾಕುವಲ್ಲಿ ಉತ್ತೇಜನವನ್ನು ನೀಡುತ್ತದೆ.
ಒಂದರ್ಥದಲ್ಲಿ ನೂತನ ನಿಯಮದಿಂದ ಇಡೀ ಭಾರತದಲ್ಲಿ ಒಂದೇ ರೀತಿಯ ವೆಚ್ಚ ಸೇರಿದಂತೆ ಹಲವು ವಿಧಗಳಲ್ಲಿ ಸಾರ್ವತ್ರಿಕ ಕಂಡುಬರಲಿದೆ ಎನ್ನಲಾಗಿದೆ. ಸದ್ಯ ಹಲವು ರಾಜ್ಯಗಳಲ್ಲಿ ಶುಲ್ಕ ಸೇರಿದಂತೆ ವಿವಿಧ ರೂಪಗಳಲ್ಲಿ ಬದಲಾವಣೆ ಇತ್ತು. ಮುಂದಿನ ವರ್ಷದಿಂದ ಇವುಗಳಲ್ಲಿ ಗಣನೀಯ ಪ್ರಮಾಣದಲ್ಲಿ ಬದಲಾವಣೆಯಾಗಲಿದೆ ಎನ್ನಲಾಗಿದೆ.