Home India ಇಂದು ಭಾರತದ Constitution Day, Dr. B R Ambedkar ಅವರ ನುಡಿಮುತ್ತುಗಳು

ಇಂದು ಭಾರತದ Constitution Day, Dr. B R Ambedkar ಅವರ ನುಡಿಮುತ್ತುಗಳು

392
Constitution Day

ಜಗತ್ತಿನ ಅತಿ ದೊಡ್ಡ ಲಿಖಿತ ಸಂವಿಧಾನವೆಂದರೆ ಭಾರತೀಯ ಸಂವಿಧಾನ. 2015 ರಿಂದ ಪ್ರತಿವರ್ಷ ನವೆಂಬರ್ 26 ರಂದು ಸಂವಿಧಾನ ದಿನವನ್ನು (Constitution Day) ಆಚರಿಸಲಾಗುತ್ತಿದೆ. ಈ ದಿನವನ್ನು ದೇಶಾದ್ಯಾಂತ ಸರ್ಕಾರಿ ಕಚೇರಿಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ ಮತ್ತು ಕೆಲವೊಂದು ಸಾರ್ವಜನಿಕ ಸ್ಥಳಗಳಲ್ಲಿ ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ಭಾರತೀಯ ಸಂವಿಧಾನ ಕುರಿತು ಜನರಲ್ಲಿ ಅರಿವು ಮೂಡಿಸಲಾಗುತ್ತದೆ.

ಸಂವಿಧಾನ ದಿನದ ಇತಿಹಾಸ

ಭಾರತವು ಬ್ರಿಟಿಷರ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆದ ನಂತರ, 1946 ರಲ್ಲಿ ಸಂವಿಧಾನ ಸಭೆಯನ್ನು ರಚಿಸಲು ಒಪ್ಪಿಗೆಯನ್ನು ನೀಡಲಾಗಿತ್ತು. 389 ಸದಸ್ಯರನ್ನೊಳಗೊಂಡ ಈ ಸಭೆಯು 1946ರ ಡಿಸೆಂಬರ್ 9 ರಂದು ನವದೆಹಲಿಯಲ್ಲಿ ಆರಂಭವಾಯಿತು. ಡಾ. ಬಾಬು ರಾಜೇಂದ್ರ ಪ್ರಸಾದರು ಸಂವಿಧಾನ ಸಭೆಯ ಅಧ್ಯಕ್ಷರಾಗಿದ್ದರೆ, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿದ್ದರು. 1949ರ ಜನವರಿ 26 ರಂದು ಭಾರತದ ಸಂವಿಧಾನವನ್ನು ಅಂಗೀಕರಿಸಲಾಯಿತು.

ಸಂವಿಧಾನದ ಮಹತ್ವ ಹಾಗೂ ಆಚರಣೆ

ಭಾರತ ಸಂವಿಧಾನ ದಿನವು ಸಂವಿಧಾನದ ಅಂಗೀಕಾರದ ದಿನವಾಗಿದೆ. ಡಾ. ಬಿ.ಆರ್.ಅಂಬೇಡ್ಕರ್ ಮತ್ತು ಇತರ ಮಹಾನ್ ನಾಯಕರ ಶ್ರಮವನ್ನು ಈ ದಿನ ನೆನಪಿಸಲಾಗುತ್ತದೆ. ದೇಶದ ಎಲ್ಲಾ ಹಕ್ಕುಗಳು ಮತ್ತು ನ್ಯಾಯಾಂಗವಿಧಿಗಳನ್ನು ಸರಿಯಾಗಿ ಜಾರಿಗೆ ತರಲು ಈ ದಿನದ ಆಚರಣೆಯು ಮಹತ್ವಪೂರ್ಣವಾಗಿದೆ.

ಡಾ. ಬಿ ಆರ್ ಅಂಬೇಡ್ಕರ್ ಅವರ ನುಡಿಮುತ್ತುಗಳು

  • “ಪ್ರಜಾಪ್ರಭುತ್ವ ಹಾಗೂ ಸ್ವರಾಜ್ಯಗಳು ಸಮಾನತೆ ಮತ್ತು ಶಾಶ್ವತ ಸ್ಥಿರತೆಯ ಮೇಲೆ ನಿಂತಿರಬೇಕು.”
  • “ನಾನು ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಕಲಿಸುವ ಧರ್ಮವನ್ನು ಇಷ್ಟಪಡುತ್ತೇನೆ.”
  • “ನೀವು ಹುಲಿ ಸಿಂಹಗಳಾಗಿ ಬದುಕಿರಿ, ಯಾಕೆಂದರೆ ಬಲಿಕೊಡುವುದು ಕುರಿಕೋಳಿಗಳಲ್ಲ.”
  • “ಸಾಮಾಜಿಕ ಸ್ವಾತಂತ್ರ್ಯವಿಲ್ಲದೆ, ಕಾನೂನಿನಿಂದ ಸ್ವಾತಂತ್ರ್ಯ ಪ್ರಾಯೋಜನವನ್ನು ಕೊಡುವುದಿಲ್ಲ.”
  • “ನಾನು ಸಮುದಾಯದ ಪ್ರಗತಿಯನ್ನು ಮಹಿಳೆಯರ ಸಾಧನೆಯಿಂದ ಅಳೆಯುತ್ತೇನೆ.”
  • “ಸಂವಿಧಾನ ಉತ್ತಮವಾಗಿ ರಚಿಸಲಾದರೂ, ಅದನ್ನು ಜಾರಿಗೆ ತರುವವರು ಕೆಟ್ಟವರಾದರೆ, ಅದು ದುರ್ಬಲವಾಗುತ್ತದೆ.”

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page