
Chikkaballapur : ಚಿಕ್ಕಬಳ್ಳಾಪುರ ನಗರದಲ್ಲಿ ಮಂಗಳವಾರ ಸಮತಾ ಸೈನಿಕ ದಳದ ಶತಮಾನೋತ್ಸವ (Samatha-Sainika Dala Centenory Celebration) ಮತ್ತು 75ನೇ ಸಂವಿಧಾನ ಸಮರ್ಪಣಾ ದಿನಾಚರಣೆಯನ್ನು (Constitution Day of India) ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಮತಾ ಸೈನಿಕ ದಳದ ರಾಷ್ಟ್ರೀಯ ಅಧ್ಯಕ್ಷ ಎಂ. ವೆಂಕಟಸ್ವಾಮಿ “ನಮ್ಮ ಸಂವಿಧಾನ ಜಗತ್ತಿನಲ್ಲಿ ಅಪರೂಪದದ್ದು. ಪ್ರತೀ ಧರ್ಮಕ್ಕೂ ಅದರದ್ದೇ ಆದ ಧರ್ಮಗ್ರಂಥವಿದೆ, ಆದರೆ ನಮ್ಮ ಸಂವಿಧಾನ ಎಲ್ಲ ಧರ್ಮಗಳ ಜನರಿಗೂ ಮಾರ್ಗದರ್ಶನ ನೀಡುತ್ತದೆ. ಸಮತಾ ಸೈನಿಕ ದಳದ ಸಂಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಹಳ್ಳಿಗಳಲ್ಲಿಯೂ ನೆಲೆ ಮಾಡಿಕೊಂಡಿದೆ. ಇತ್ತೀಚೆಗೆ ಹಲವು ಸಂಘಟನೆಗಳ ಮುಖಂಡರು ನಮ್ಮ ಸಂಘವನ್ನು ಸೇರುತ್ತಿದ್ದಾರೆ. DSS ಮುಖಂಡರು ಸಿದ್ದರಾಮಯ್ಯ ಅವರನ್ನು ಮಾದರಿಯಾಗಿಸಿಕೊಂಡಿದ್ದಾರೆ, ಆದರೆ ನಮ್ಮ ಮಾದರಿಯವರು ಅಂಬೇಡ್ಕರ್. ಬಿ.ಆರ್. ಅಂಬೇಡ್ಕರ್ ಅವರು ಈ ಸಂಘಟನೆಯ ಉದ್ದೇಶ ‘ಮಾನವ ಕಲ್ಯಾಣ’ ಎಂದಿದ್ದಾರೆ” ಎಂದು ತಿಳಿಸಿದರು.
ಅಲ್ಲಮಪ್ರಭು ಮಠದ ತಿಪ್ಪೇರುದ್ರ ಸ್ವಾಮೀಜಿ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿದ್ದ ಕಾರ್ಯಕ್ರಮದಲ್ಲಿ ಸಮತಾ ಸೈನಿಕ ದಳದ ಮುಖಂಡರಾದ ಜಿ.ಸಿ. ವೆಂಕಟರಮಣಪ್ಪ, ಸತೀಶ್, ಜಿ. ಗೋವಿಂದಯ್ಯ, ಜೆ. ನಾಗರಾಜ್, ಲಯನ್ಸ್ ಬಾಲಕೃಷ್ಣ, ಆರ್‌ಪಿಐ ಯುವ ಘಟಕದ ಅಧ್ಯಕ್ಷ ಜಿ.ಪಿ. ಪ್ರಶಾಂತ್ ಮತ್ತಿತರರು ಪಾಲ್ಗೊಂಡಿದ್ದರು.
For Daily Updates WhatsApp ‘HI’ to 7406303366
The post ಸಮತಾ ಸೈನಿಕ ದಳದ ಶತಮಾನೋತ್ಸವ appeared first on Chikkaballapur | Chikballapur | Chikkaballapura Latest Breaking New Stories | ಚಿಕ್ಕಬಳ್ಳಾಪುರ ಸುದ್ದಿ.