ಪರಿಕ್ರಮ ಚಾಂಪಿಯನ್ಸ್ ಲೀಗ್ 2024 ರೋಚಕ ಪಂದ್ಯಗಳಿಗೆ (Parikrma Champions League) ಸಾಕ್ಷಿಯಾಯಿತು. ಅರ್ಜುನ ಪ್ರಶಸ್ತಿ ಪುರಸ್ಕೃತ ಮತ್ತು ಮಾಜಿ ಭಾರತೀಯ ಅಥ್ಲೀಟ್ ರೀತ ಅಬ್ರಹಾಂ ಅವರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಅಂತಾರಾಷ್ಟ್ರೀಯ ಚಾಂಪಿಯನ್ಶಿಪ್ಗಳಲ್ಲಿ ಭಾರತವನ್ನು ಪ್ರತಿನಿಧಿಸಿರುವ ಮಾಜಿ ಫುಟ್ಬಾಲ್ ಆಟಗಾರ್ತಿ ಅಮೂಲ್ಯ ಕಮಲ್ ಉಪಸ್ಥಿತರಿದ್ದರು. ಈ ಅತಿಥಿಗಳು ಕ್ರೀಡಾಪಟುಗಳಿಗೆ ಮತ್ತು ಮಕ್ಕಳಿಗೆ ಸ್ಪೂರ್ತಿ ನೀಡಿದರು.
ಕ್ರೀಡೆ ಮತ್ತು ಗುಣಮಟ್ಟದ ಶಿಕ್ಷಣವನ್ನು ಉತ್ತೇಜಿಸುವ ಮೂಲಕ ಪರಿಕ್ರಮ ಮುಂಚೂಣಿಯಲ್ಲಿದೆ.
12ನೇ ವರ್ಷದಲ್ಲಿ ಪರಿಕ್ರಮ ಚಾಂಪಿಯನ್ಸ್ ಲೀಗ್ ಪ್ರಾರಂಭವಾಗಿದೆ. ಈ ಟೂರ್ನಿಯಲ್ಲಿ ದೇಶಾದ್ಯಾಂತ ಖ್ಯಾತ ಕ್ರೀಡಾಪಟುಗಳು ಭಾಗವಹಿಸಿದ್ದಾರೆ, ಇದು ಹೆಮ್ಮೆಯ ವಿಚಾರವಾಗಿದೆ.
ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀ ರಿತೇಶ್ ಕುಮಾರ್ ಸಿಂಗ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ರಾಜ್ಯದ ಅನುಭವಿ ಫುಟ್ಬಾಲ್ ಆಟಗಾರ ಥಾಮಸ್ ಜೋಸೆಫ್, ಮೋಟರ್ ಸೈಕಲಿಸ್ಟ್ ಸಮೀರ ದಹಿಯಾ ಮತ್ತು ಕೆ ಎಸ್ ಎಫ್ ಎ ಉಪ ಪ್ರಧಾನ ಕಾರ್ಯದರ್ಶಿ ಅಸ್ಲಾಂ ಖಾನ್ ಅವರನ್ನು ಸನ್ಮಾನಿಸಲಾಯಿತು.
16 ವರ್ಷಕ್ಕೊಳಗಿನ ಫುಟ್ಬಾಲ್ ಟೂರ್ನಿಯಲ್ಲಿ ಕೆಲ ಪ್ರಮುಖ ಪಂದ್ಯಗಳು ನಡೆದವು. ಅಶೋಕ ನಗರದ ಫುಟ್ಬಾಲ್ ಕ್ರೀಡಾಂಗಣದಲ್ಲಿ ನಡೆದ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗ್ರೀನ್ ವುಡ್ ಶಾಲೆ ಜಯ ಸಾಧಿಸಿತು.
ಎಂಟರ ಘಟ್ಟದ ಪಂದ್ಯದಲ್ಲಿ ಗ್ರೀನ್ ವುಡ್ 4-0 ಗೋಲುಗಳಿಂದ ಸೆಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ತಂಡವನ್ನು ಸೋಲಿಸಿತು.
ಮತ್ತಿತರ ಪಂದ್ಯಗಳಲ್ಲಿ, ಅಲೋಷಿಯಸ್ 2-0 ಗೋಲುಗಳಿಂದ ವಿದ್ಯಾನಿಕೇತನ, ಡೆಲ್ಲಿ ಪಬ್ಲಿಕ್ ಸ್ಕೂಲ್ 2-0 ಗೋಲುಗಳಿಂದ ರಯಾನ್ ಇಂಟರ್ನ್ಯಾಷನಲ್, ಸೆಂಟ್ ಜೋಸೆಫ್ ಬಾಲಕರ ಶಾಲೆ 5-0 ಗೋಲುಗಳಿಂದ ಆರ್ಮಿ ಪಬ್ಲಿಕ್ ಶಾಲೆ, ಪಾಟರಿ ಟೌನ್ ಸರ್ಕಾರಿ ಶಾಲೆ 2-0 ಗೋಲುಗಳಿಂದ ಬಿಷಪ್ ಕಾಟನ್ ತಂಡವನ್ನು ಸೋಲಿಸಿತು.
ಕನ್ನಡದ ಸ್ಟಾರ್ ಅಥ್ಲೀಟ್, ರೀತಿ ಅಬ್ರಹಾಂ ಅವರು ಅನೇಕ ಅಂತಾರಾಷ್ಟ್ರೀಯ ಚಾಂಪಿಯನ್ಶಿಪ್ಗಳಲ್ಲಿ ಭಾರತವನ್ನು ಪ್ರತಿನಿಧಿಸಿ ಸಾಧನೆ ಮಾಡಿದ್ದಾರೆ.
1989ರ ಸೌತ್ ಏಷ್ಯನ್ ಗೇಮ್ಸ್‌ನಲ್ಲಿ 100 ಮೀಟರ್ ಹರ್ಡಲ್ಸ್‌ನಲ್ಲಿ ಮತ್ತು ಲಾಂಗ್ ಜಂಪ್‌ನಲ್ಲಿ ಸ್ವರ್ಣ ಪದಕ ಗಳಿಸಿದ್ದಾರೆ. 1991ರ ಫುದರ್ ಲಾಂಗ್ ಜಂಪ್‌ನಲ್ಲಿ ಅವರು ಮತ್ತೊಮ್ಮೆ ಸ್ವರ್ಣ ಪದಕ ಗೆದ್ದಿದ್ದಾರೆ.
ಜೊತೆಗೆ, ಅವರು ವಿಶ್ವ ಮಾಸ್ಟರ್ಸ್ ಅಥ್ಲೇಟಿಕ್ಸ್ ಚಾಂಪಿಯನ್ಶಿಪ್‌ನಲ್ಲಿ ಒಂದನೇ ಬಂಗಾರ, ಎರಡು ಬೆಳ್ಳಿ, ಮತ್ತು ಎರಡು ಕಂಚು ಪದಕಗಳನ್ನು ಪಡೆದಿದ್ದಾರೆ.