Moscow: ಮಾಸ್ಕೋದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿರುವ ಬಾಂಬ್ ಸ್ಫೋಟದಿಂದ ರಷ್ಯಾದ ಪರಮಾಣು ರಕ್ಷಣಾ ಪಡೆಗಳ ಮುಖ್ಯಸ್ಥ, ಹಿರಿಯ ಜನರಲ್ ಲೆಫ್ಟಿನೆಂಟ್ ಜನರಲ್ ಇಗೊರ್ ಕಿರಿಲ್ಲೋವ್(Russia’s nuclear defence forces, Senior Lieutenant General Igor Kirillov) (ಮಂಗಳವಾರ) ಸಾವನ್ನಪ್ಪಿದ್ದಾರೆ. ಅವರು ಕ್ರೆಮ್ಲಿನ್‌ನಿಂದ 7 ಕಿ.ಮೀ ದೂರದಲ್ಲಿರುವ ರಿಯಾಜಾನ್ಸ್ಕಿ ಪ್ರಾಸ್ಪೆಕ್ಟ್‌ನಲ್ಲಿರುವ ಅಪಾರ್ಟ್ಮೆಂಟ್ ಕಟ್ಟಡದ ಬಳಿ ಬಾಂಬ್ ದಾಳಿಯಿಂದ ಮೃತರಾಗಿದ್ದಾರೆ. ಈ ದಾಳಿಯಲ್ಲಿ ಕಿರಿಲ್ಲೋವ್ ಅವರ ಸಹಾಯಕ ಸಹ ಸಾವನ್ನಪ್ಪಿದ್ದಾರೆ.
ಇಗೊರ್ ಕಿರಿಲ್ಲೋವ್ ಅವರು ಉಕ್ರೇನ್ ವಿರುದ್ಧದ ಯುದ್ಧದಲ್ಲಿ ನಿಷೇಧಿತ ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ಬಳಸಿದ ಹಿನ್ನೆಲೆಯಲ್ಲಿ ಉಕ್ರೇನಿಯನ್ ಕೋರ್ಟ್ ಅವರಿಗೆ ಗೈರುಹಾಜರಿ ಶಿಕ್ಷೆ ವಿಧಿಸಿತ್ತು. ಸ್ಫೋಟಕ ಸಾಧನವು ರಿಮೋಟ್‌ನಿಂದ ಸ್ಫೋಟಿತವಾಗಿದ್ದು, ಅದರ ಶಕ್ತಿಯು ಸುಮಾರು 300 ಗ್ರಾಂ ಟಿಎನ್‌ಟಿಯಷ್ಟಿದೆ ಎಂದು ರಷ್ಯಾದ ಸುದ್ದಿ ಸಂಸ್ಥೆ ಟಿಎಎಸ್ಎಸ್ ವರದಿ ಮಾಡಿದೆ.
ಉಕ್ರೇನಿಯನ್ ಭದ್ರತಾ ಸೇವೆಯ ಪ್ರಕಾರ, ಯುದ್ಧದ ಆರಂಭದಿಂದಲೂ ಕಿರಿಲ್ಲೋವ್ ಅವರ ಆದೇಶದ ಮೇರೆಗೆ ರಷ್ಯಾದ ರಾಸಾಯನಿಕ ಯುದ್ಧಸಾಮಗ್ರಿಗಳನ್ನು ಬಳಸಿದ 4,800 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.