2025 ರ ಜನವರಿ 17 ಮತ್ತು 22 ರ ನಡುವೆ ನವದೆಹಲಿಯಲ್ಲಿ ನಡೆಯಲಿರುವ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್ಪೋದಲ್ಲಿ (Bharat Mobility Global Expo) ‘ವೈವ್ ಮೊಬಿಲಿಟಿ’ ತಮ್ಮ ಬಹುನಿರೀಕ್ಷಿತ ಇವಾ ಕಾಂಪ್ಯಾಕ್ಟ್ ಸೋಲಾರ್ ಎಲೆಕ್ಟ್ರಿಕ್ (Eva Compact Solar Electric Car) ಕಾರನ್ನು ಪ್ರದರ್ಶಿಸಲಿದೆ. ಈ ಕಾರು compact, ದಕ್ಷ ಮತ್ತು ಪರಿಸರ ಸ್ನೇಹಿ ಎಂದು ಸಾಕಷ್ಟು ಮೆಚ್ಚುಗೆ ಗಳಿಸಿದೆ.
ಪ್ರತಿ ಚಾರ್ಜ್ ಗೆ 250 ಕಿ.ಮೀ ರೇಂಜ್ ಮತ್ತು ಸೋಲಾರ್ ಪವರ್‌ನೊಂದಿಗೆ 3000 ಕಿ.ಮೀ ಉಚಿತ ವ್ಯಾಪ್ತಿಯನ್ನು ನೀಡುತ್ತದೆ. ಹೈ-ವೋಲ್ಟೇಜ್ ಪವರ್ಟ್ರೇನ್ ತಂತ್ರಜ್ಞಾನದಿಂದ ಸೂಪರ್ ಫಾಸ್ಟ್ ಚಾರ್ಜಿಂಗ್ ಸಕ್ರಿಯಗೊಳ್ಳುತ್ತದೆ, ಕೇವಲ 5 ನಿಮಿಷಗಳಲ್ಲಿ 50 ಕಿ.ಮೀ ರೇಂಜ್ ಹೆಚ್ಚಿಸುತ್ತದೆ.
ಇವನಲ್ಲಿ 0 ರಿಂದ 40 kmph ವೇಗವನ್ನು ಕೇವಲ 5 ಸೆಕೆಂಡುಗಳಲ್ಲಿ ತಲುಪಿಸಲು ಸಾಧ್ಯ. 70 kmph ಟಾಪ್ ಸ್ಪೀಡ್‍ನೊಂದಿಗೆ, ಇದು ನಗರದ ಟ್ರಾಫಿಕ್‌ನಲ್ಲಿ ಉತ್ತಮ ಡ್ರೈವಿಂಗ್ ಅನುಭವವನ್ನು ಒದಗಿಸುತ್ತದೆ.
ಈ ಕಾರಿನ ಇಂಧನ ವೆಚ್ಚವು ಪ್ರತಿ ಕಿ.ಮೀಗೆ 0.5 ರೂ. ಆಗಿದ್ದು, ಸಾಂಪ್ರದಾಯಿಕ ಪೆಟ್ರೋಲ್ ಕಾರುಗಳಿಗಿಂತ ಬಹುಶಃ ಅಗ್ಗದು.
ಈ ಕಾರು ಸಾಂಪ್ರದಾಯಿಕ ಕಾರುಗಳಿಗಿಂತ ಸುಸ್ಥಿರ ಮತ್ತು ಕಡಿಮೆ ಬೆಲೆಯ ಆಯ್ಕೆಯಾಗಿದೆ. “ಇವಾ ಹಗುರ ಮತ್ತು ಹೆಚ್ಚಿನ ದಕ್ಷತೆಯ ಎಂಜಿನಿಯರಿಂಗ್‍ನೊಂದಿಗೆ ನಗರ ಕಾರುಗಳ ಹೊಸ ವರ್ಗವನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ,” ಎಂದು ವೈವ್ ಮೊಬಿಲಿಟಿಯ ಸಿಇಒ ನಿಲೇಶ್ ಬಜಾಜ್ ಹೇಳಿದ್ದಾರೆ.
ಇವಾ ಸೌರ ಶಕ್ತಿ ಮತ್ತು ಸ್ಮಾರ್ಟ್ ಸಂಪರ್ಕವನ್ನು ಸಂಯೋಜಿಸುವ ಕಾರು, ಇದು ಭವಿಷ್ಯದಲ್ಲಿ ನಗರ ಚಲನಶೀಲತೆಗೆ ಸೂಕ್ತ ಪರಿಹಾರವಾಗಲಿದೆ.