ದೇಶದ ಟೆಲಿಕಾಂ ವಲಯದಲ್ಲಿ ಅಗ್ರಸ್ಥಾನದಲ್ಲಿ ಇರುವ ಜಿಯೋ ಟೆಲಿಕಾಂನ (Jio Telecom) ಈ ನೂತನ ರೀಚಾರ್ಜ್ ಪ್ಲ್ಯಾನ್ ಅಧಿಕ ಡೇಟಾ ಜೊತೆಗೆ ಹೆಚ್ಚಿನ ವ್ಯಾಲಿಡಿಟಿ ಬಯಸುವ ಗ್ರಾಹಕರಿಗೆ ಸೂಕ್ತ ಎನಿಸಿದೆ. ಅಂದಹಾಗೆ ಈ ಯೋಜನೆಯಲ್ಲಿ ಬಳಕೆದಾರರಿಗೆ ಒಟ್ಟು 500GB ಡೇಟಾ ಪ್ರಯೋಜನ ಸಿಗಲಿದೆ. ಹೊಸ ವರ್ಷದ ಆರಂಭದಲ್ಲಿ (New Year 2025) ಈ ನೂತನ ಪ್ಲ್ಯಾನ್ ಟ್ರೆಂಡ್‌ನಲ್ಲಿ ಕಾಣಿಸಿಕೊಂಡಿದೆ.
ಈ ಪ್ಲ್ಯಾನ್‌ನ ಪ್ರಮುಖ ವಿಶೇಷತೆಗಳೆಂದರೆ:
- 500 GB ಡೇಟಾ: ಬಳಕೆದಾರರಿಗೆ ಒಟ್ಟು 500 GB ಡೇಟಾ ಲಭ್ಯ.
- 200 ದಿನಗಳ ವ್ಯಾಲಿಡಿಟಿ: ಈ ಪ್ಲ್ಯಾನ್ 200 ದಿನಗಳ Validity ಅವಧಿಯನ್ನು ಹೊಂದಿದೆ.
- ದೈನಂದಿನ 2.5 GB ಡೇಟಾ: ಪ್ರತಿದಿನ 2.5 GB ಡೇಟಾ ಸೌಲಭ್ಯ.
- ಉಚಿತ SMS: ಪ್ರತಿದಿನ 100 ಎಸ್ಎಮ್ಎಸ್ ಸೌಲಭ್ಯ.
- ಅನಿಯಮಿತ ವಾಯಿಸ್ ಕರೆಗಳು: ಜಿಯೋ ಗ್ರಾಹಕರಿಗೆ ಅನಿಯಮಿತ ಫ್ರೀ ವಾಯಿಸ್ ಕರೆಗಳು ಲಭ್ಯ.
- ಜಿಯೋ ಆಪ್ಗಳ ಸೌಲಭ್ಯ: ಜಿಯೋ ಸೇವೆಗಳಿಗೆ ಪ್ರವೇಶ.
ಇದೆಲ್ಲವನ್ನು ಒಳಗೊಂಡಿರುವ “ಜಿಯೋ 2025 ರೂ. ಪ್ರೀಪೇಯ್ಡ್ ಪ್ಲ್ಯಾನ್” ಹೊಸ ವರ್ಷದ ಸಮಯದಲ್ಲಿ ಅತ್ಯಂತ ಆಕರ್ಷಕವಾಗಿದೆ.