ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮುಂಜಾನೆ ಮತ್ತು ಸಂಜೆ ಸಮಯದಲ್ಲಿ ಚಳಿ ಹೆಚ್ಚಾಗಿದ್ದು, (Karnataka experienced cold) ಕೆಲವು ಭಾಗಗಳಲ್ಲಿ ಮಂಜು ಕೂಡ ಕಾಣಿಸಿಕೊಂಡಿದೆ. ಜನರು ಬೆಳ್ಳಂ ಬೆಳಗ್ಗೆ ತಮ್ಮ ದಿನಚರ್ಯೆ ಆರಂಭಿಸಲು ಮನೆಯಿಂದ ಹೊರಗೊಳ್ಳಲು ಕಷ್ಟಪಡುವಂತಾಗಿದೆ. ಹವಾಮಾನ ಇಲಾಖೆ ಮುಂದಿನ ಕೆಲವು ದಿನಗಳವರೆಗೆ ಇದೇ ಹವಾಮಾನ ನಿರೀಕ್ಷಿಸಲಾಗಿದೆ, ದಟ್ಟ ಮಂಜು ಹಾಗೂ ಕಡಿಮೆಯಾದ ತಾಪಮಾನಗಳು ಮುಂದುವರಿಯುವ ಸಾಧ್ಯತೆ ಇದೆ.
ಮುಖ್ಯ ಮಾಹಿತಿ
- ಮಂಗಳವಾರ (ಜನವರಿ 7) ತಾರೀಕಿನವರೆಗೆ ರಾಜ್ಯಾದ್ಯಾಂತ ಒಣಹವಾಮಾನ ಉಳಿಯಲಿದೆ.
- ಶನಿವಾರ (ಜನವರಿ 4) ದಕ್ಷಿಣ ಒಳನಾಡಿನಲ್ಲಿ ಮಂಜು ಅಥವಾ ದಟ್ಟ ಮಂಜು ಎದುರಾಗಬಹುದು.
- ಮುಂದಿನ ಎರಡು ದಿನಗಳಲ್ಲಿ ಕನಿಷ್ಠ ತಾಪಮಾನ 2 ಡಿಗ್ರಿ ಸೆಲ್ಸಿಯಸ್ ಇಳಿಯುವ ಸಾಧ್ಯತೆ.
ನಗರಗಳಲ್ಲಿ ತಾಪಮಾನ ಮಾಹಿತಿ
- ಬೆಂಗಳೂರು: ಗರಿಷ್ಠ 25°C, ಕನಿಷ್ಠ 15°C
- ಮೈಸೂರು: ಗರಿಷ್ಠ 28°C, ಕನಿಷ್ಠ 16°C
- ಮಂಗಳೂರು: ಗರಿಷ್ಠ 32°C, ಕನಿಷ್ಠ 22°C
- ಶಿವಮೊಗ್ಗ: ಗರಿಷ್ಠ 28°C, ಕನಿಷ್ಠ 14°C
- ಬೆಳಗಾವಿ: ಗರಿಷ್ಠ 28°C, ಕನಿಷ್ಠ 16°C
- ಕೋಲಾರ: ಗರಿಷ್ಠ 24°C, ಕನಿಷ್ಠ 13°C
- ತುಮಕೂರು: ಗರಿಷ್ಠ 26°C, ಕನಿಷ್ಠ 13°C
ಮುಂದಿನ ಎರಡು ದಿನಗಳವರೆಗೆ ಕನಿಷ್ಠ ತಾಪಮಾನವು 2 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.