Home Health ಗಸಗಸೆಯ ಆರೋಗ್ಯ ಪ್ರಯೋಜನಗಳು

ಗಸಗಸೆಯ ಆರೋಗ್ಯ ಪ್ರಯೋಜನಗಳು

373
Poppy seeds

ಗಸಗಸೆ ಬೀಜಗಳನ್ನು (Poppy seeds) ಜಗತ್ತಾದ್ಯಾಂತ ಹಲವು ಸಾಂಪ್ರದಾಯಿಕ ಆಹಾರಗಳಲ್ಲಿ ಬಳಸಲಾಗುತ್ತದೆ. ಬೀಜಗಳು ಮತ್ತು ಅವುಗಳ ಎಣ್ಣೆ ಅನೇಕ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತವೆ.

ನೆನಪಿನ ಶಕ್ತಿ ಹೆಚ್ಚಿಸಲು: ಗಸಗಸೆಯಲ್ಲಿರುವ ಕ್ಯಾಲ್ಸಿಯಂ ಮತ್ತು ಮ್ಯಾಗ್ನೆಷಿಯಂ ಮಿದುಳಿನ ಕಾರ್ಯಗಳನ್ನು ಉತ್ತೇಜಿಸುವುದರಿಂದ ನೆನಪಿನ ಶಕ್ತಿ ಹೆಚ್ಚುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಸಮೃದ್ಧ ಪೋಷಕಾಂಶಗಳು: ಗಸಗಸೆಯು ಪ್ರೋಟೀನ್, ಕೊಬ್ಬು, ವಿಟಮಿನ್, ಕ್ಯಾಲ್ಸಿಯಂ ಇತ್ಯಾದಿ ಪೋಷಕಾಂಶಗಳನ್ನು ಒಳಗೊಂಡಿದೆ. ಇದು ದೇಹದ ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಸಹಕಾರಿ. ಗಸಗಸೆ ಸೇವನೆಯಿಂದ ನಿದ್ರಾಹೀನತೆ ಸಹ ಕಡಿಮೆಯಾಗಬಹುದು.

ಹೃದಯದ ಆರೋಗ್ಯ: ಗಸಗಸೆಯಲ್ಲಿರುವ ಒಮೇಗಾ-6 ಕೊಬ್ಬು ಹಾಗೂ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಮೂಲಕ ಹೃದಯದ ಆರೋಗ್ಯವನ್ನು ಉತ್ತಮಗೊಳಿಸುತ್ತದೆ.

ಚರ್ಮದ ಆರೋಗ್ಯ: ಗಸಗಸೆಯಲ್ಲಿ ಇರುವ ವಿಟಮಿನ್ ಇ ಮತ್ತು ನಾರಿನಾಂಶಗಳು ಚರ್ಮವನ್ನು ತಾಜಾ ಮತ್ತು ತೇವಯುಕ್ತವಾಗಿರಿಸಲು ಸಹಾಯ ಮಾಡುತ್ತದೆ. ಇದರಿಂದ ಚರ್ಮದ ಆರೋಗ್ಯ ಸುಧಾರಿಸುತ್ತದೆ.

ಎಲುಬುಗಳ ಶಕ್ತಿ: ಗಸಗಸೆಯಲ್ಲಿನ ಕ್ಯಾಲ್ಸಿಯಂ ಮತ್ತು ಫೋಸ್ಫರಸ್ ಎಲುಬು ಮತ್ತು ಹಲ್ಲುಗಳನ್ನು ಬಲಪಡಿಸಲು ಅಗತ್ಯವಿರುವ ಪೋಷಕಾಂಶಗಳನ್ನು ಒದಗಿಸುತ್ತದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page