Bengaluru: ಶೇ. 60 ಕಮಿಷನ್ ದಂಧೆ ನಡೆಯುತ್ತಿದೆ ಎನ್ನುವುದರ ಬಗ್ಗೆ ದಾಖಲೆಗಳನ್ನು ನೀಡಲು ಸಿದ್ದರಾಮಯ್ಯ ಕೋರಿದ್ದು, (Siddaramaiah) ಅದಕ್ಕೆ ಹೆಚ್.ಡಿ. ಕುಮಾರಸ್ವಾಮಿ (H.D. Kumaraswamy) ತೀಕ್ಷ್ಣ ತಿರುಗೇಟು ನೀಡಿದ್ದಾರೆ.
ಕುಮಾರಸ್ವಾಮಿ ತಮ್ಮ ಟ್ವೀಟ್‌ನಲ್ಲಿ, ಗುತ್ತಿಗೆದಾರರ ಬಿಲ್ ಬಾಕಿ ಬಾಕಿ ಪಟ್ಟಿ ಪ್ರಕಟಿಸಿ, “ಖೊಟ್ಟಿ ಗ್ಯಾರಂಟಿ ಸರಕಾರದ ಲೂಟಿ ಸಾಕ್ಷಿಗುಡ್ಡೆ ಇಲ್ಲಿದೆ” ಎಂದು ಆರೋಪಿಸಿದ್ದಾರೆ. “ನಿಮ್ಮ ಗ್ಯಾರಂಟಿ ಹೆಸರಿನ ಸರ್ಕಾರ ಗುತ್ತಿಗೆದಾರರಿಂದ ಕೋಟಿ ಕೋಟಿ ಹಣ ಸುಲಿಗೆ ಮಾಡುತ್ತಿದೆ” ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಗುತ್ತಿಗೆದಾರರ ಬಾಕಿ ಪಟ್ಟಿ (₹32,000 ಕೋಟಿ)
- ಜಲ ಸಂಪತ್ತು ಇಲಾಖೆ: ₹14,600 ಕೋಟಿ
- ಲೋಕೋಪಯೋಗಿ: ₹10,000 ಕೋಟಿ
- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್: ₹3,100 ಕೋಟಿ
- ಸಣ್ಣ ನೀರಾವರಿ: ₹2,800 ಕೋಟಿ
- ಇತರೆ ಇಲಾಖೆ: ₹1,500 ಕೋಟಿ
ಕುಮಾರಸ್ವಾಮಿ ಗುತ್ತಿಗೆದಾರರ ಬಾಕಿ ಪಾವತಿ ವಿಷಯದಲ್ಲಿ ಸರಕಾರದ ನಿಲುವು ತೀವ್ರ ಟೀಕೆಗೆ ಒಳಪಡಿಸಿದ್ದು, “ತಪ್ಪು ಸರಿಪಡಿಸಿ, ರಾಜ್ಯದ ಅಭಿವೃದ್ಧಿಗೆ ಕೆಲಸ ಮಾಡಿ” ಎಂದು ಸೂಚಿಸಿದ್ದಾರೆ.