BenQ GW2790Q Monitor: BenQ ಸಂಸ್ಥೆ 27 ಇಂಚಿನ ಹೊಸ GW2790Q ಮಾನಿಟರ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಪ್ರೊಜೆಕ್ಟರ್ ಮತ್ತು ಮಾನಿಟರ್ ಕ್ಷೇತ್ರದಲ್ಲಿ ತನ್ನ ಸ್ಥಾನವನ್ನು ಸ್ಥಾಪಿಸಿದ್ದ BenQ, ಈ ಹೊಸ ಮಾನಿಟರ್‌ನ್ನು ಕೆಲಸ ಮತ್ತು ಮನರಂಜನೆ ಎರಡಕ್ಕೂ ಅನುಕೂಲಕರವಾಗಿ ವಿನ್ಯಾಸ ಮಾಡಿದೆ.
ಮಾದರಿ ಮತ್ತು ವೈಶಿಷ್ಟ್ಯಗಳು: GW2790Q ಮಾನಿಟರ್ 2K QHD ರೆಸಲ್ಯೂಶನ್ ಮತ್ತು 100Hz ರಿಫ್ರೆಶ್ ರೇಟ್‌ನ್ನು ಹೊಂದಿದೆ. ಇದರ 27 ಇಂಚಿನ QHD 2K IPS ಪ್ಯಾನೆಲ್‌ವು 2560 x 1440 ಪಿಕ್ಸೆಲ್ ರೆಸಲ್ಯೂಶನ್ ಸಪೋರ್ಟ್ ನೀಡುತ್ತದೆ. 99% sRGB ಬಣ್ಣದ ಕವರೇಜ್, 1500:1 ಲೋಕಲ್ ಕಾಂಟ್ರಾಸ್ಟ್ ಅನುಪಾತ ಮತ್ತು ಸುಗಮ ವೀಕ್ಷಣೆಗೆ 178 ಡಿಗ್ರಿ ವೀಕ್ಷಣೆಯ ನೋಟ ಹಾಗೂ 109 PPI ಪಿಕ್ಸೆಲ್ ಪ್ರತಿ ಇಂಚಿಗೆ ನೀಡಲಾಗಿದೆ.
ಆಧುನಿಕ ತಂತ್ರಜ್ಞಾನಗಳು: ಈ ಮಾನಿಟರ್ ಫ್ಲಿಕರ್-ಫ್ರೀ, ಬ್ರೈಟ್‌ನೆಸ್ ಇಂಟೆಲಿಜೆನ್ಸ್ ಜನ್ 2, ಲೋ ಬ್ಲೂ ಲೈಟ್ ಪ್ಲಸ್, ಕಲರ್ ವೀಕ್ನೆಸ್, ಇ-ಪೇಪರ್ ಮತ್ತು ಐ ರಿಮೈಂಡರ್ ಜತೆಗೆ ಬರುತ್ತದೆ. 2 x 2W ಸ್ಪೀಕರ್‌ಗಳು ಮತ್ತು ಹೆಡ್ಫೋನ್ ಜ್ಯಾಕ್ ವ್ಯವಸ್ಥೆಯು ಉತ್ತಮ ಧ್ವನಿ ಅನುಭವವನ್ನು ನೀಡುತ್ತದೆ.
ಬೆಲೆ ಮತ್ತು ಲಭ್ಯತೆ: BenQ GW2790Q ಮಾನಿಟರ್‌ನ ಆರಂಭಿಕ ಬೆಲೆ ₹14,990 ಆಗಿದ್ದು, ಈ ಮಾನಿಟರ್ ಅನ್ನು BenQ ಇ-ಸ್ಟೋರ್, ಅಮೆಜಾನ್.ಇನ್ ಮತ್ತು ಇತರ ಪ್ರಮುಖ ಇ-ಕಾಮರ್ಸ್ ಪ್ಲಾಟ್ಫಾರ್ಮ್ ಗಳಿಂದ ಖರೀದಿಸಬಹುದು.