ಬ್ಯಾಂಕುಗಳು (bank) ಹಾಗೂ ಹಣಕಾಸು ಸಂಸ್ಥೆಗಳು ತಮ್ಮ ಗ್ರಾಹಕರ ದೂರುಗಳನ್ನು ಕೂಡಲೇ ಇತ್ಯರ್ಥಪಡಿಸಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ (RBI-Reserve Bank of India) ಸೂಚಿಸಿದೆ. ಗ್ರಾಹಕರ ದೂರುಗಳನ್ನು ಒಂದು ತಿಂಗಳೊಳಗೆ ಪರಿಹರಿಸದಿದ್ದರೆ, ಪ್ರತಿದಿನಕ್ಕೂ 100 ರೂ. ದಂಡ (penalty) ವಿಧಿಸಲಾಗುತ್ತದೆ. ಈ ನಿಯಮ ಕ್ರೆಡಿಟ್ ಇನ್ಫಾರ್ಮೇಶನ್ ಕಂಪನಿಗಳಿಗೆ (CIC) ಕೂಡ ಅನ್ವಯಿಸುತ್ತದೆ. ದಂಡದ ಮೊತ್ತವು ಗ್ರಾಹಕರಿಗೆ ಪರಿಹಾರವಾಗಿ ನೀಡಲಾಗುತ್ತದೆ.
RBI, ಸಿಬಿಲ್, ಎಕ್ಸ್ಪೀರಿಯನ್ ಮುಂತಾದ ಕ್ರೆಡಿಟ್ ಇನ್ಫಾರ್ಮೇಶನ್ ಕಂಪನಿಗಳಿಂದ ಗ್ರಾಹಕರ ಕ್ರೆಡಿಟ್ ಮಾಹಿತಿಯನ್ನು ಪಡೆದಾಗ ಗ್ರಾಹಕರಿಗೆ ಇಮೇಲ್ ಅಥವಾ ಎಸ್ಸೆಮ್ಮೆಸ್ ಮೂಲಕ ಮಾಹಿತಿ ನೀಡುವಂತೆ ಸೂಚಿಸಿದೆ.
ಬ್ಯಾಂಕುಗಳು, ತಮ್ಮ ಗ್ರಾಹಕರು ಸಾಲ ಮರುಪಾವತಿಸಲು ವಿಫಲವಾದರೆ, ಆ ಮಾಹಿತಿಯನ್ನು 21 ದಿನಗಳ ಒಳಗೆ ಗ್ರಾಹಕರಿಗೆ ನೀಡಬೇಕು. ಇದನ್ನು ಪಾಲಿಸದಿದ್ದರೆ, 100 ರೂ. ದಂಡ ವಿಧಿಸಲಾಗುತ್ತದೆ.
ಬ್ಯಾಂಕುಗಳು ಮತ್ತು ಸಿಐಸಿ, ತಮ್ಮ ಗ್ರಾಹಕರಿಂದ ಬಂದ ದೂರುಗಳನ್ನು 30 ದಿನಗಳೊಳಗೆ ಇತ್ಯರ್ಥಪಡಿಸಬೇಕು.