ಬೇಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ, (Kempegowda International Airport) ‘ಏರೋ ಇಂಡಿಯಾ 2025’ ಏರ್ ಶೋ ಕಾರಣದಿಂದಾಗಿ ವಿಮಾನ ಹಾರಾಟಗಳು ನಿಗದಿತ ವೇಳಾಪಟ್ಟಿಯಲ್ಲಿ ಸ್ಥಗಿತಗೊಳ್ಳಲಿದೆ. ಫೆಬ್ರವರಿ 10 ರಿಂದ 14 ರವರೆಗೆ ಯಲಹಂಕ ವಾಯುನೆಲೆಯಲ್ಲಿ ಏರ್ ಶೋ ನಡೆಯಲಿದೆ. ಈ ಸಮಯದಲ್ಲಿ ವಿಮಾನ ಟೇಕಾಫ್ ಹಾಗೂ ಲ್ಯಾಂಡಿಂಗ್ ಸ್ಥಗಿತಗೊಳ್ಳುವ ನಿರ್ಧಾರವನ್ನು ಮುನ್ನೆಚ್ಚರಿಕಾ ಕ್ರಮವಾಗಿ ತೆಗೆದುಕೊಳ್ಳಲಾಗಿದೆ.
ನಿರ್ಬಂಧಿತ ಸಮಯಗಳು
- ಫೆಬ್ರವರಿ 5 ರಿಂದ 8: ಬೆಳಿಗ್ಗೆ 9 ರಿಂದ 12 ಗಂಟೆ ಮತ್ತು ಮಧ್ಯಾಹ್ನ 2 ರಿಂದ ಸಂಜೆ 5 ಗಂಟೆ.
- ಫೆಬ್ರವರಿ 9: ಬೆಳಿಗ್ಗೆ 9 ರಿಂದ 12 ಗಂಟೆ.
- ಫೆಬ್ರವರಿ 10: ಬೆಳಿಗ್ಗೆ 9 ರಿಂದ 12 ಗಂಟೆ ಮತ್ತು ಮಧ್ಯಾಹ್ನ 2 ರಿಂದ ಸಂಜೆ 4 ಗಂಟೆ.
- ಫೆಬ್ರವರಿ 11 ಮತ್ತು 12: ಮಧ್ಯಾಹ್ನ 12 ರಿಂದ 3 ಗಂಟೆ.
- ಫೆಬ್ರವರಿ 13 ಮತ್ತು 14: ಬೆಳಿಗ್ಗೆ 9 ರಿಂದ 12 ಗಂಟೆ ಹಾಗೂ ಮಧ್ಯಾಹ್ನ 2 ರಿಂದ ಸಂಜೆ 5 ಗಂಟೆ.
ಯಲಹಂಕ ವಾಯುನೆಲೆಯಲ್ಲಿ ಏಷ್ಯಾದ ಅತಿದೊಡ್ಡ ಏರ್ ಶೋ ನಡೆಯಲಿದ್ದು, ಅನೇಕ ದೇಶಗಳ ಗಣ್ಯರು, ಉದ್ಯಮಿಗಳು, ಹಾಗೂ ವಾಯುಪಡೆ ಸಿಬ್ಬಂದಿ ಭಾಗವಹಿಸಲಿದ್ದಾರೆ. ವಾಯುಪಡೆಯ ಆಕರ್ಷಕ ವಿಮಾನ ಹಾರಾಟಗಳು ಹಾಗೂ ಪ್ರದರ್ಶನಗಳು ಆಕರ್ಷಣೆಗಳಾಗಲಿವೆ.
ಪ್ರಯಾಣಿಕರು ತಮ್ಮ ವಿಮಾನಯಾನ ವೇಳಾಪಟ್ಟಿಯನ್ನು ದಯವಿಟ್ಟು ಏರ್‌ಲೈನ್ ಸಿಬ್ಬಂದಿಯಿಂದ ಮಾಹಿತಿ ಪಡೆದು ಯೋಜಿಸಿಕೊಳ್ಳುವುದು ಸೂಕ್ತ.
ಏರ್ ಶೋಗೆ ಆಗಮಿಸುವವರಿಗಾಗಿ ವಾಯುಪಡೆಯು ಪಾರ್ಕಿಂಗ್ ಮತ್ತು ಉಚಿತ ಬಸ್ ವ್ಯವಸ್ಥೆ ಕಲ್ಪಿಸಿದೆ. 15ನೇ ಆವೃತ್ತಿಯ ಈ ಕಾರ್ಯಕ್ರಮಕ್ಕೆ ಲಕ್ಷಾಂತರ ಜನರ ಆಗಮನ ನಿರೀಕ್ಷಿಸಲಾಗಿದೆ.