ಬಜೆಟ್ ಅಧಿವೇಶನ ಜನವರಿ 31 ರಂದು (Budget Session 2025) ಆರಂಭವಾಗಲಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು (President Droupadi Murmu) ಸಂಸತ್ತಿನ ಉಭಯ ಸದನಗಳಿಗೆ ಭಾಷಣ ನೀಡಲಿದ್ದಾರೆ. ಅಧಿವೇಶನದ ಮೊದಲ ಭಾಗ ಜನವರಿ 31 ರಿಂದ ಫೆಬ್ರವರಿ 13ರವರೆಗೆ ನಡೆಯಲಿದೆ. ಎರಡನೇ ಭಾಗ ಮಾರ್ಚ್ 10ರಂದು ಆರಂಭವಾಗಿ ಏಪ್ರಿಲ್ 4ರಂದು ಮುಗಿಯಲಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು ಬೆಳಿಗ್ಗೆ 11 ಗಂಟೆಗೆ ಲೋಕಸಭೆಯಲ್ಲಿ ಕೇಂದ್ರ ಬಜೆಟ್ 2025ನ್ನು ಮಂಡಿಸಲಿದ್ದಾರೆ.
ಜ. 30ರಂದು ಸರ್ವಪಕ್ಷ ಸಭೆ ಆಯೋಜಿಸಲಾಗಿದ್ದು, ವಿರೋಧ ಪಕ್ಷಗಳ ಸಹಕಾರದಿಂದ ಸದನದಲ್ಲಿ ಚರ್ಚೆ ಸುಗಮಗೊಳಿಸುವ ಉದ್ದೇಶವಿದೆ.
ಒಟ್ಟು 27 ಅಧಿವೇಶನಗಳು ನಡೆಯಲಿದ್ದು, ಬಜೆಟ್ ಪ್ರಸ್ತಾವನೆಗಳ ಚರ್ಚೆ ಹಾಗೂ ಸಚಿವಾಲಯಗಳ ಅನುದಾನದ ಬೇಡಿಕೆಗಳ ಪರಿಶೀಲನೆ ಪ್ರಮುಖ ಹಂತವಾಗಲಿದೆ.
ಬಜೆಟ್ ಪ್ರಕ್ರಿಯೆ ಪೂರ್ಣಗೊಂಡು ಅಧಿವೇಶನ ಏಪ್ರಿಲ್ 4ರಂದು ಮುಗಿಯಲಿದೆ.