ಹರ್ಪಾಲ್ಪುರ್ (Harpalpur) ನಿಲ್ದಾಣದಲ್ಲಿ ಕುಂಭಮೇಳಕ್ಕೆ (Kumbh Mela) ಹೊರಟಿದ್ದ ವಿಶೇಷ ರೈಲಿನ ಬಾಗಿಲು ತೆರೆಯದ ಕಾರಣ ಪ್ರಯಾಣಿಕರು ಕೋಪಗೊಂಡು ಕಲ್ಲು ತೂರಿ ಬಾಗಿಲು ಒಡೆದಿದ್ದಾರೆ. ಈ ದಾಳಿಯಿಂದ ರೈಲಿನಲ್ಲಿದ್ದ ಇತರ ಪ್ರಯಾಣಿಕರು ಭಯಭೀತರಾಗಿದ್ದಾರೆ.
ಝಾನ್ಸಿಯಿಂದ ಪ್ರಯಾಗ್ರಾಜ್ ಗೆ ಹೊರಟಿದ್ದ ರೈಲು, ಮಧ್ಯರಾತ್ರಿ 2 ಗಂಟೆಗೆ ಹರ್ಪಾಲ್ಪುರ್ ಸ್ಟೇಷನ್‌ಗೆ ತಲುಪಿತು. ಆದರೆ, ಒಂದು ಬೋಗಿಯ ಬಾಗಿಲು ತೆರೆಯಲಿಲ್ಲ. ಕೋಪಗೊಂಡ ಪ್ರಯಾಣಿಕರು ಕಲ್ಲು ಬಳಸಿ ಬಾಗಿಲು ಮತ್ತು ಗಾಜು ಒಡೆದು ಹಾಕಿದರು. ಈ ಘಟನೆಯ ದೃಶ್ಯಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಹರ್ಪಾಲ್ಪುರ್ ಪೊಲೀಸ್ ಠಾಣೆಯ ವರದಿ ಪ್ರಕಾರ, ಪ್ರಯಾಣಿಕರ ಅತಿಯಾದ ಸಂಖ್ಯೆ ಹಾಗೂ ಬಾಗಿಲು ಸ್ವಯಂ ಮುಚ್ಚಿಕೊಂಡಿರುವುದೇ ಸಮಸ್ಯೆಗೆ ಕಾರಣವಾಗಿದೆ. ಈ ಘಟನೆ ಕುರಿತು ಪೊಲೀಸರು ಹಾಗೂ ರೈಲ್ವೆ ಇಲಾಖೆ ತನಿಖೆ ಆರಂಭಿಸಿದ್ದು, ದಾಳಿ ಮಾಡಿದವರಿಗೆ ಕ್ರಮ ಕೈಗೊಳ್ಳಲಾಗುವುದು.
ಹಣ ಕೊಟ್ಟು ಟಿಕೆಟ್ ಖರೀದಿಸಿ ಅರ್ಧ ದಿನ ಕಾಯುತ್ತಾ ಕುಳಿತರೂ ನಮಗೆ ಟ್ರೇನ್‌ನಲ್ಲಿ ಹೋಗಲು ಅವಕಾಶ ಸಿಗಲಿಲ್ಲವೆಂದು ಸ್ವಯಂ ಆಗಿ ಮುಚ್ಚಿಕೊಂಡ ರೈಲಿನ ಬಾಗಿಲನ್ನು ಕಲ್ಲಿನಿಂದ ಒಡೆದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆಯ ಹಿಂದಿನ ನಿಜವಾದ ಕಾರಣವನ್ನು ಹೊರತಂದ ನಂತರ, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.