ಚಾಂಪಿಯನ್ಸ್ ಟ್ರೋಫಿ 2025 (Champions Trophy 2025) ಪಂದ್ಯಗಳು ಕೆಲವೇ ದಿನಗಳಲ್ಲಿ ಆರಂಭವಾಗಲಿವೆ, ಮತ್ತು ಪಾಕಿಸ್ತಾನವು ಈ ಟೂರ್ನಿಗೆ ಆತಿಥ್ಯ ನೀಡುತ್ತಿದೆ. ಪಾಕಿಸ್ತಾನದಲ್ಲಿ ಏಳು ವರ್ಷಗಳ ಬಳಿಕ ಈ ಟೂರ್ನಿ ನಡೆಯುತ್ತಿರುವುದರಿಂದ ಎಲ್ಲರಿಗೂ ಕುತೂಹಲವಾಗಿದೆ. ಆದರೆ, ಮೈದಾನದ ಸಿದ್ಧತೆ ಹಾಗೂ ವ್ಯವಸ್ಥೆಗಳ ಬಗ್ಗೆ ಹಲವಾರು ಸುದ್ದಿಗಳು ಹರಿದಾಡುತ್ತಿವೆ.
ಈಗ ಸುದ್ದಿಯ ಪ್ರಕಾರ, ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಇಂದು (ಶುಕ್ರವಾರ) ಐಸಿಸಿಗೆ ಮೈದಾನವನ್ನು ಹಸ್ತಾಂತರಿಸಬೇಕಾದ ಕೊನೆಯ ದಿನವಾಗಿದೆ, ಆದರೆ ಗಡುವಿನೊಳಗೆ ಯಾವುದೇ ಮುನ್ನಡೆಯೂ ಇಲ್ಲ. ಐಸಿಸಿ ಗರಂ ಆಗಿದ್ದು, ಪಾಕಿಸ್ತಾನದಲ್ಲಿ ಕೆಲವು ಮೈದಾನಗಳಲ್ಲಿ ಸುಧಾರಣೆ ಕಾರ್ಯಗಳು ಇನ್ನೂ ನಡೆಯುತ್ತಿವೆ.
ಮಧ್ಯಾಹ್ನದ ವೇಳೆಗೆ ಪಾಕಿಸ್ತಾನದ ಖ್ಯಾತ ಮಾಧ್ಯಮ ಸಂಸ್ಥೆಯಾದ “ಡಿ ಡಾನ್” ಏನು ಹೇಳಿದೆಯೆಂದರೆ, ಐಸಿಸಿ ನೀಡಿದ ಗಡುವಿನಲ್ಲಿ ಮೈದಾನಗಳನ್ನು ಪೂರ್ಣಗೊಳಿಸುವುದು ಅಸಾಧ್ಯ ಎಂದು ಹೇಳಿದೆ. ಆದರೆ ಪಿಸಿಬಿ ಹಮ್ಮಿಕೊಂಡಿರುವ ಪೂರ್ಣಗೊಳಿಸುವ ಕಾರ್ಯಗಳಿಗೆ ಸುಮಾರು 1200 ಕೋಟಿ ಪಾಕಿಸ್ತಾನಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ.
ಈ ಮೆಗಾ ಟೂರ್ನಿ ಫೆಬ್ರವರಿ 19ರಂದು ಕರಾಚಿಯಲ್ಲಿ ಆರಂಭವಾಗಲಿದ್ದು, ಆರಂಭಿಕ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿವೆ.
ಇನ್ನು, ಚಾಂಪಿಯನ್ಸ್ ಟ್ರೋಫಿ 2025 ಪಂದ್ಯಗಳನ್ನು ಹೈ ಬ್ರಿಡ್ ಮಾಡೆಲ್ನಲ್ಲಿ ನಡೆಸಲಾಗುವುದು. ಭಾರತ, ಪಾಕಿಸ್ತಾನ ನಡುವಿನ ಪಂದ್ಯಗಳು ದುಬೈನಲ್ಲಿ ನಡೆಯಲಿವೆ.
ಈ ಟೂರ್ನಿಗೆ ಒಟ್ಟು ಎಂಟು ತಂಡಗಳು ಭಾಗವಹಿಸಲಿವೆ. ಭಾರತ “ಎ” ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಪಾಕಿಸ್ತಾನ, ಬಾಂಗ್ಲಾದೇಶ, ಮತ್ತು ನ್ಯೂಜಿಲೆಂಡ್ ತಂಡಗಳು ಲೀಗ್ ನಲ್ಲಿ ಭಾಗವಹಿಸಲಿವೆ.