ಆರ್ಥಿಕ ಸಮೀಕ್ಷೆಯು (Economic Survey 2025) ದೇಶದ ಆರ್ಥಿಕತೆಯ ಕುರಿತ ಸಮಗ್ರ ವಿಶ್ಲೇಷಣೆಯನ್ನು ನೀಡುತ್ತದೆ. ಇದು ಆರ್ಥಿಕತೆ, ಹಣಕಾಸು, ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಉಂಟಾದ ಬೆಳವಣಿಗೆಗಳನ್ನು ವಿವರಿಸುತ್ತದೆ. ಇದು ಬಜೆಟ್ ಪೂರ್ವದ ಪ್ರಮುಖ ದಾಖಲೆ ಆಗಿದ್ದು, ದೇಶದ ಆರ್ಥಿಕ ಸ್ಥಿತಿಯನ್ನು ಅಂದಾಜಿಸಲು ಸಹಾಯ ಮಾಡುತ್ತದೆ.
ಆರ್ಥಿಕ ಸಮೀಕ್ಷೆ ಯಾರು ಸಿದ್ಧಪಡಿಸುತ್ತಾರೆ?
ಈ ಆರ್ಥಿಕ ಸಮೀಕ್ಷೆಯನ್ನು ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯ ಆರ್ಥಿಕ ವಿಭಾಗ ಸಿದ್ಧಪಡಿಸುತ್ತದೆ. ಪ್ರತೀ ವರ್ಷ ಆರ್ಥಿಕ ತಜ್ಞರು ಈ ವರದಿಯನ್ನ ಪರಿಶೀಲಿಸಿ, ಆರ್ಥಿಕ ಬೆಳವಣಿಗೆಯು ಹೇಗೆ ಮುಂದುವರಿದಿದೆ ಎಂದು ವಿಶ್ಲೇಷಣೆ ಮಾಡುತ್ತಾರೆ.
ಆರ್ಥಿಕ ಸಮೀಕ್ಷೆಯು ಹೇಗೆ ಉಪಯುಕ್ತವಾಗಿದೆ?
ಆರ್ಥಿಕ ಸಮೀಕ್ಷೆ ದೇಶದ ಆರ್ಥಿಕ ಪರಿಸ್ಥಿತಿಯನ್ನು ವಿಶ್ಲೇಷಿಸಲು ಸಹಾಯ ಮಾಡುತ್ತದೆ. ಇದು ಆರ್ಥಿಕ ಬೆಳವಣಿಗೆ, ಹಣಕಾಸಿನ ಸೂಚಕಗಳು, ಮತ್ತು ಮುಂದಿನ ಯೋಜನೆಗಳ ಕುರಿತು ವಿವರಗಳನ್ನು ನೀಡುತ್ತದೆ. ಈ ಸಮೀಕ್ಷೆಯು ಕೇಂದ್ರ ಬಜೆಟ್‌ನ ದಿಕ್ಕನ್ನು ಸೂಚಿಸುತ್ತದೆ.
2025ರ ಆರ್ಥಿಕ ಸಮೀಕ್ಷೆ ಮಂಡನೆ
2025ರ ಜನವರಿ 31ರಂದು, ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಈ ಆರ್ಥಿಕ ಸಮೀಕ್ಷೆಯನ್ನು ಮಂಡಿಸಲಿದ್ದಾರೆ. ನಂತರ, ಮುಖ್ಯ ಆರ್ಥಿಕ ಸಲಹೆಗಾರ ವಿ.ಅನಂತ ನಾಗೇಶ್ವರನ್ ಅವರು 2025 ಬಜೆಟ್ ಕುರಿತು ತಮ್ಮ ಮಾತುಗಳನ್ನು ಪ್ರಸ್ತುತಪಡಿಸಲಿದ್ದಾರೆ.
ಆರ್ಥಿಕ ಸಮೀಕ್ಷೆ ಪ್ರಸ್ತಾವನೆ ಸಮಯ
2025ರ ಜನವರಿ 31ರಂದು ಮಧ್ಯಾಹ್ನ 12:00 PM ಮತ್ತು 1:00 PM ಗಂಟೆಯ ನಡುವೆ ಈ ಸಮೀಕ್ಷೆ ಸಂಸತ್ತಿನಲ್ಲಿ ಮಂಡಿಸಲಾಗುತ್ತದೆ.
ಆರ್ಥಿಕ ಸಮೀಕ್ಷೆಯ ಇತಿಹಾಸ
ಆರ್ಥಿಕ ಸಮೀಕ್ಷೆಯು ಮೊದಲಿಗೆ 1950-51ರಲ್ಲಿ ಬಜೆಟ್ ದಾಖಲೆಯ ಭಾಗವಾಗಿ ಪ್ರಾರಂಭವಾಯಿತು. ನಂತರ 1960ರಿಂದ ಬಜೆಟ್ ಗೂ ಮುನ್ನ ಪ್ರಸ್ತುತಪಡಿಸಲು ಪ್ರಾರಂಭವಾಯಿತು.