ದೇಶದಲ್ಲಿ ಇತ್ತೀಚೆಗೆ ನಡೆದ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್ಪೋ 2025 (Auto Expo 2025)ನಲ್ಲಿ ಹ್ಯುಂಡೈ ಸ್ಟಾರಿಯಾ (Hyundai Staria) ಕಾರು ಪ್ರದರ್ಶನಗೊಳಿಸಲಾಯಿತು. 2021ರಿಂದ ಇದು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ಈ ಕಾರು ಭಾರತದಲ್ಲಿ ಪ್ರದರ್ಶನೆಯಾಗಿದೆಯಾದರೂ, ಹೊರಗಿನ ದೇಶಗಳಲ್ಲಿ ಇದು ಇಷ್ಟು ದಿನ ಲಭ್ಯವಿದ್ದರೂ ಭಾರತದಲ್ಲಿ ಇದರ ಅಧಿಕೃತ ಬಿಡುಗಡೆ ಬಗ್ಗೆ ಯಾವುದೇ ಮಾಹಿತಿ ನೀಡಲಾಗಿಲ್ಲ. ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಂಡ ಮಾದರಿ 7-ಸೀಟರ್ ಆವೃತ್ತಿಯಾಗಿದೆ, ಆದರೆ 9-ಸೀಟರ್ ಮತ್ತು 11-ಸೀಟರ್ ಆಯ್ಕೆಗಳು ಕೂಡ ಲಭ್ಯವಿವೆ.
ವಾಹನದ ವಿನ್ಯಾಸ ಮತ್ತು ವೈಶಿಷ್ಟ್ಯಗಳು: ಹ್ಯುಂಡೈ ಸ್ಟಾರಿಯಾ ದೊಡ್ಡ ಗಾತ್ರದ ಫ್ಯೂಚರಿಸ್ಟಿಕ್ ವಿನ್ಯಾಸವನ್ನು ಹೊಂದಿದೆ. ಈ ಕಾರಿನ ವಿಂಡೋ ಪ್ಯಾನೆಲ್ ಗಳು ದೊಡ್ಡವಿದ್ದು, ಸ್ಲೈಡಿಂಗ್ ಡೋರ್‌ಗಳು, ಹಿಂಭಾಗದಲ್ಲಿ ಲಂಬವಾಗಿ ಜೋಡಿಸಲಾದ ಟೈಲ್ ಲೈಟ್ಗಳು, ಎಲ್ಇಡಿ ಡಿಆರ್ಎಲ್ ಸ್ಟ್ರಿಪ್, ಬಂಪರ್ನಲ್ಲಿ ದೊಡ್ಡ ಗ್ರಿಲ್ ಹಾಗೂ ಪಿಕ್ಸೆಲೇಟೆಡ್ ಪ್ಯಾಟರ್ನ್ ಹೆಡ್ಲೈಟ್ ಗಳನ್ನು ಒಳಗೊಂಡಿವೆ.
ಇಂಟೀರಿಯರ್: ಸ್ಟಾರಿಯಾವನ್ನು ಹ್ಯುಂಡೈ ಕ್ರೆಟಾದಂತೆ ವಿನ್ಯಾಸಗೊಳಿಸಲಾಗಿದೆ. ಇದರ ಇಂಟೀರಿಯರ್‌ನಲ್ಲಿ 64-ಕಲರ್ ಆಂಬಿಯೆಂಟ್ ಲೈಟಿಂಗ್, ಬೋಸ್ ಸೌಂಡ್ ಸಿಸ್ಟಮ್, 10.25-ಇಂಚಿನ ಟಚ್ ಸ್ಕ್ರೀನ್ ಸಿಸ್ಟಮ್, ಮತ್ತು ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಇದ್ದು, ಸುರಕ್ಷತೆಗಾಗಿ 7 ಏರ್ ಬ್ಯಾಗ್ ಗಳು, ADAS, ಮತ್ತು ರಿವರ್ಸಿಂಗ್ ಕ್ಯಾಮೆರಾ ನೀಡಲಾಗಿದೆ.
ಹ್ಯುಂಡೈ ಸ್ಟಾರಿಯಾ 11 ಜನರಿಗೆ ಕುಳಿತುಕೊಳ್ಳಲು ಸಮರ್ಪಕವಾಗಿ ವಿನ್ಯಾಸಗೊಳ್ಳುತ್ತಿದೆ, ಮತ್ತು 9 ಸೀಟರ್, 7 ಸೀಟರ್ ಆಯ್ಕೆಗಳು ಕೂಡ ಲಭ್ಯವಿವೆ. 7-ಸೀಟರ್ ಮಾದರಿಯು ‘ವಿಶ್ರಾಂತಿ’ ಆಸನಗಳೊಂದಿಗೆ ಬರುತ್ತದೆ, ಇದರಿಂದ ಸೀಟ್‌ಗಳನ್ನು ಸರಿದೂಗಿಸಬಹುದಾಗಿದೆ.
ಎಂಜಿನ್ ಮತ್ತು ಪೆಟ್ರೋಲ್/ಡೀಸೆಲ್ ಆಯ್ಕೆಗಳು: ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿತ ಮಾದರಿ 3.5-ಲೀಟರ್ ವಿ6 ಎಂಜಿನ್ ಹೊಂದಿದ್ದು, 272 ಬಿಹೆಚ್ ಪವರ್ ಮತ್ತು 331 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇದರೊಂದಿಗೆ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹಾಗೂ ಫ್ರಂಟ್ ವೀಲ್ ಡ್ರೈವ್ ವ್ಯವಸ್ಥೆ ನೀಡಲಾಗಿದೆ. ೩.5-ಲೀಟರ್ ಎಂಜಿನ್ ಪೆಟ್ರೋಲ್ ಮತ್ತು
ಬೆಲೆ ಮತ್ತು ಆಯ್ಕೆಗಳು: ಹ್ಯುಂಡೈ ಸ್ಟಾರಿಯಾ 11-ಸೀಟರ್ ಕಾರು ₹65 ಲಕ್ಷಕ್ಕೂ ಹೆಚ್ಚು (ಎಕ್ಸ್ ಶೋರೂಂ) ಬೆಲೆಗೆ ಲಭ್ಯವಾಗಬಹುದು.