ಕೇಂದ್ರ ಸರ್ಕಾರ ರಾಜ್ಘಾಟ್ನಲ್ಲಿ ಪ್ರಣಬ್ ಮುಖರ್ಜಿ (Pranab Mukherjee) ಅವರ ಸ್ಮಾರಕದ ಬಳಿಯೇ ಮನಮೋಹನ್ ಸಿಂಗ್ (Manmohan Singh) ಅವರ ಸ್ಮಾರಕವನ್ನು ನಿರ್ಮಿಸಲು ಚಿಂತನೆ ನಡೆಸುತ್ತಿದೆ. ಈ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಸರ್ಕಾರವು ಮನಮೋಹನ್ ಸಿಂಗ್ ಅವರ ಸ್ಮಾರಕಕ್ಕಾಗಿ ರಾಜ್ಘಾಟ್ ಸಂಕೀರ್ಣದಲ್ಲಿ ಸ್ಥಳ ಮೀಸಲಿಡುವ ಬಗ್ಗೆ final ಹಂತದಲ್ಲಿದೆ.
ಕುಟುಂಬವು ಟ್ರಸ್ಟ್ ಸ್ಥಾಪಿಸಲು ನಿರ್ಧರಿಸಿದ ನಂತರ, ಸ್ಮಾರಕಕ್ಕಾಗಿ ಭೂಮಿ ಹಂಚಿಕೆಯಾಗಲಿದೆ. ಈ ಕಾರ್ಯಕ್ಕಾಗಿ ಸರ್ಕಾರವು 25 ಲಕ್ಷ ರೂ. ದೇಣಿಗೆ ನೀಡಲು ಮುಂದಾಗಿದೆ. ಹೊಸ ನೀತಿ ಪ್ರಕಾರ, ಭೂಮಿಯನ್ನು ಟ್ರಸ್ಟ್ ಸ್ಥಾಪನೆಯಾದ ಬಳಿಕ ಮಾತ್ರ ಹಂಚಿಕೆಯಾಗಬಹುದು. ಟ್ರಸ್ಟ್ ಭೂಮಿಯ ಹಂಚಿಕೆಗೆ ಅರ್ಜಿ ಸಲ್ಲಿಸಿದ ನಂತರ, ನಿರ್ಮಾಣ ಪ್ರಕ್ರಿಯೆ CPWD ಸಹಯೋಗದಲ್ಲಿ ನಡೆಯಲಿದೆ.
ಪ್ರಣಬ್ ಮುಖರ್ಜಿ ಅವರ ಸ್ಮಾರಕಕ್ಕೆ ಸಂಬಂಧಿಸಿದಂತೆ, ಭಾರತ ಸರ್ಕಾರ ಅವರ ಕುಟುಂಬದಿಂದ ಭೂಮಿಯ ಆಯ್ಕೆಗಾಗಿ ಸ್ಮಾರಕ ನಿರ್ಮಾಣ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. 92 ವರ್ಷದ ಪ್ರಣಬ್ ಮುಖರ್ಜಿ 2020ರ ಆಗಸ್ಟ್ 31ರಂದು ನಿಧನರಾದರು.